ದೆಹಲಿಯಲ್ಲಿ ಕುಖ್ಯಾತ ರೌಡಿಶೀಟರ್‌ ರಾಜನ್ ಪಾಠಕ್ ಸೇರಿದಂತೆ ನಾಲ್ವರ ಎನ್‌ ಕೌಂಟರ್

Most read

ನವದೆಹಲಿ: ಬಿಹಾರದ ಕುಖ್ಯಾತ ರೌಡಿಶೀಟರ್‌ ರಾಜನ್ ಪಾಠಕ್ ಸೇರಿದಂತೆ ನಾಲ್ವರನ್ನು ದೆಹಲಿಯಲ್ಲಿ ಇಂದು ಬೆಳಗಿನಜಾವ ಎನ್‌ ಕೌಂಟರ್‌ ನಲ್ಲಿ ಹತ್ಯೆ ಮಾಡಲಾಗಿದೆ.

ದೆಹಲಿ ಪೊಲೀಸ್ ಹಾಗೂ ಬಿಹಾರ ಪೊಲೀಸರು ಕೈಗೊಂಡ ಜಂಟಿ ಕಾರ್ಯಾಚರಣೆಯಲ್ಲಿ  ರೋಹಿಣಿಯ ರಸ್ತೆಯಲ್ಲಿಇಂದು ಬೆಳಗಿನ ಜಾವ 2.20ಕ್ಕೆ  ನಡೆದ ಎನ್‌ ಕೌಂಟರ್‌ ನಲ್ಲಿಇವರ ಹತ್ಯೆ ನಡೆದಿದೆ. ಮೂವರು ಪೊಲೀಸರಿಗೂ ಗಾಯಗಳಾಗಿವೆ.

ರಾಜನ್ ಪಾಠಕ್ (25),  ಬಿಮ್ಲೇಶ್‌ ಮಹ್ತೋ (25), ಮನೀಶ್‌ ಪಾಠಕ್‌ (33) ಮತ್ತು ಅಮರ್‌ ಠಾಕೂರ್‌ (21) ಅವರ ತಂಡ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಲು ಸಂಚು ರೂಪಿಸಿತ್ತು. ತಮ್ಮ ಬೇಡಿಕೆಗೆ ಮಣಿಯದವರ ವಿರುದ್ಧ ವಿದ್ವಂಸಕ ಕೃತ್ಯಗಳನ್ನು ನಡೆಸಲೂ ಯೋಜನೆ ರೂಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರ ಬಂಧನಕ್ಕೆ ಬಿಹಾರ ಪೊಲೀಸರು ಕಳೆದ ಹಲವು ದಿನಗಳಿಂದ ಬಲೆ ಬೀಸಿದ್ದರು. ರಾಜನ್‌ ಪಾಠಕ್ ಹಾಗೂ ಆತನ ಸಹಚರರ ಮೇಲೆ ಅನೇಕ ಕೊಲೆ, ಬೆದರಿಕೆ, ದರೋಡೆ, ಅಕ್ರಮ ಶಸ್ತ್ರಾಸ್ತ್ರ ಪ್ರಕರಣಗಳು ದಾಖಲಾಗಿದ್ದವು.

ಇಂದು ಬೆಳಗಿನ ಜಾವ 2.30ಕ್ಕೆ ರೋಹಿಣಿಯ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲು ಮುಂದಾದಾಗ ರಾಜನ್ ಹಾಗೂ ಆತನ ಸಹಚರರು ಪೊಲೀಸರತ್ತ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಎನ್‌ಕೌಂಟರ್ ನಡೆಸಿದ್ದಾರೆ. ಕೂಡಲೇ ಗಂಭಿರವಾಗಿ ಗಾಯಗೊಂಡಿದ್ದ ನಾಲ್ವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಫಲಕಾರಿಯಾಗದೆ ಅಸುನೀಗಿದ್ದಾರೆ.

More articles

Latest article