ಕೋಲಾರ. ದೆಹಲಿ ಕೆಂಪುಕೋಟೆ ಸಮೀಪ ಸಂಭವಿಸಿದ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯಲ್ಲೂ ಕಟ್ಟೆಚ್ಚರ ವಹಿಸಲಾಗಿದ್ದು ವಿಧ್ವಂಸಕ ವಿರೋಧಿ ತಂಡದಿಂದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ
ಜಿಲ್ಲಾ ರಕ್ಷಣಣಾಧಿಕಾರಿ ನಿಖಿಲ್ ಅವರ ಸೂಚನೆ ಮೇರೆಗೆ ಜಿಲ್ಲೆಯ ASC (ವಿಧ್ವಂಸಕ ವಿರೋಧಿ) ತಂಡದ ನೇತೃತ್ವದಲ್ಲಿ ಶ್ವಾನ ದಳ ಮತ್ತು ಸ್ಫೋಟಕ ಪತ್ತೆ ತಜ್ಞರ ಸಹಾಯದಿಂದ ಸಾರ್ವಜನಿಕ ಆಸ್ಪತ್ರೆಗಳುˌ APMC ಮಾರುಕಟ್ಟೆ ಪ್ರದೇಶˌ KSRTC ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣ, ತಾಲ್ಲೂಕು ಕಚೇರಿ ಆವರಣ , ಮಹಾತ್ಮಾಗಾಂಧಿ ರಸ್ತೆ,ದೊಡ್ಡಪೇಟೆ ರಸ್ತೆ, ಕಾಳಮ್ಮ ಗುಡಿ ರಸ್ತೆ ಇನ್ನಿತರೆ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಅನುಮಾನಾಸ್ಪದ ವಸ್ತುಗಳು ಅಥವಾ ಚಟುವಟಿಕೆಗಳನ್ನು ಕಂಡ ಕೂಡಲೇ ತಕ್ಷಣ 112 / 9480802600 ˌ 8277962929 ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಲು ಜಿಲ್ಲಾಡಳಿತ ಕೋರಿದೆ.

