ಕೆಂಪುಕೋಟೆ ಸ್ಫೋಟ: ಮೂವರು ವೈದ್ಯರು, ಧಾರ್ಮಿಕ ಬೋಧಕನ ಬಂಧಿಸಿದ ಎನ್‌ಐಎ

Most read

ನವದೆಹಲಿ: ನವಂಬರ್‌ 10 ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಐ-20 ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ವೈದ್ಯರು ಹಾಗೂ ಧಾರ್ಮಿಕ ಬೋಧಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಶಕ್ಕೆ ಪಡೆದಿದೆ. ಕಾಶ್ಮೀರ ಪುಲ್ವಾಮಾದ ಡಾ. ಮುಜಮ್ಮಿಲ್ ಶಕೀಲ್ ಗನಿ, ಅನಂತನಾಗ್‌ ಜಿಲ್ಲೆಯ ಡಾ. ಅದೀಲ್ ಅಹ್ಮದ್ ರಾಥರ್, ಶೋಪಿಯಾನ್ ನ ಮತ್ತು ಉತ್ತರ ಪ್ರದೇಶದ ಡಾ. ಶಾಹೀನ್ ಸಯೀದ್ ಮತ್ತು ಮೌಲ್ವಿ ಮುಫ್ತಿ ಇರ್ಫಾನ್ ಅಹ್ಮದ್ ವಾಗೆ ಬಂಧಿತ ಆರೋಪಿಗಳು. ಈ ಮೂಲಕ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದವರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಪ್ರಕರಣ ಸಂಬಂಧ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ ಎಂದು ಎನ್‌ ಐಎ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಐಎ ಈಗಾಗಲೇ ಅಮೀರ್ ರಶೀದ್ ಅಲಿ ಮತ್ತು ಜಾಸಿರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ ಎಂಬುವರನ್ನು ಬಂಧಿಸಿದೆ.

ದೆಹಲಿ ಸ್ಫೋಟದಲ್ಲಿ ಇವರ ಪಾತ್ರ ಇದೆ ಎಂದು ಎನ್‌ಐಎ ತಿಳಿಸಿದೆ. ಹೆಚ್ಚಿನ ತನಿಖೆಗಾಗಿ ನ. 11ರಂದು ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಗಿತ್ತು.

More articles

Latest article