ಫೆ. 22 ಮತ್ತು 26 ರಂದು ʼಭಗವಂತನ ಮರಣʼ ನಾಟಕ ಪ್ರದರ್ಶನ

ʼಹಿಂಸೆಯಿಂದ ಅಹಿಂಸೆಯ ಕಡೆಗೆ ,ಅಜ್ಞಾನದಿಂದ ಜ್ಞಾನದ ಕಡೆಗೆʼ

ಬೆಂಗಳೂರು : ಸಮುದಾಯ ಬೆಂಗಳೂರು,  ಕೆ.ಆರ್. ಮೀರಾ ಅವರ ಮಲಯಾಳಂ ಕಥೆ ಆಧಾರಿತ   ‘ಭಗವಂತನ ಮರಣ’  ನಾಟಕ ಫೆಬ್ರವರಿ 22  ರಂದು ಸಂಜೆ 7  ಗಂಟೆಗೆ  ರವೀಂದ್ರ ಕಲಾಕ್ಷೇತ್ರದಲ್ಲಿ ಹಾಗೂ  ಫೆಬ್ರವರಿ  26  ರಂದು ಸಂಜೆ 7-30ಕ್ಕೆ  ರಂಗ ಶಂಕರದಲ್ಲಿ ಪ್ರದರ್ಶನಗಳನ್ನು  ಆಯೋಜಿಸಲಾಗಿದೆ.

ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ಇವರ ರಂಗರೂಪ, ವಿನ್ಯಾಸ, ರಂಗಸಜ್ಜಿಕೆ, ಸಂಗೀತ ಮತ್ತು ನಿರ್ದೇಶಿಸಿದೆ ಹಾಗೂ ಪದ್ಮಾ ಶಿವಮೊಗ್ಗ ಸಹ ನಿರ್ದೇಶನ ಮಾಡಿರುತ್ತಾರೆ. ಕನ್ನಡಕ್ಕೆ ಕೆ. ಪ್ರಭಾಕರನ್‌  ಅನುವಾದಿಸಿದ್ದಾರೆ.

ಭಗವಂತನ ಮರಣ : ಧಾರ್ಮಿಕ ಅಸಹಿಷ್ಣುತೆಯಿಂದ ಹೆಚ್ಚಾಗುತ್ತಿರುವ ಹಿಂಸೆಯ ನಿರರ್ಥಕತೆ, ಹಾಗೂ ಮೂಲಭೂತವಾದಿ ಸಂಘಟನೆಗಳು ಇಂತಹ ಹಿಂಸಾಚಾರಕ್ಕೆ ದಲಿತ ಹಿಂದುಳಿದ ವರ್ಗದ ಯುವಕರನ್ನು ಬಳಸಿಕೊಳ್ಳುತ್ತಿರುವುದು, ಅಮಾಯಕರಾದ ಯುವಕರು ಧರ್ಮದ ಅಮಲಿಗೆ ಬಿದ್ದು, ಹಿಂಸೆಯನ್ನು ಕೈಗೆತ್ತಿಕೊಳ್ಳುವುತ್ತಿರುವುದನ್ನು ಭಗವಂತನ ಸಾವು ನಾಟಕ ತೀವ್ರವಾಗಿ ವಿಶ್ಲೇಷಿಸುತ್ತದೆ. ನಾಟಕ ಹಿಂಸೆಯ ನಿರರ್ಥಕತೆಯನ್ನು ಹೇಳುತ್ತಲೇ ಜ್ಞಾನದ ಬಲದಿಂದ ಅಜ್ಞಾನದ ಕೇಡನ್ನು ನೋಡುವಂತೆ ಪ್ರೇರೇಪಿಸುತ್ತದೆ.

ಸಂಘಟನೆಯೊಂದರ ಕಾರ್ಯಕರ್ತನಾದ ಯುವಕನೊಬ್ಬ  ತನ್ನ ಸಂಘಟನೆಯ ಆದೇಶದ ಅನುಸಾರವಾಗಿ  ಪ್ರೊಫೆಸರ್ ಒಬ್ಬರನ್ನು  ಕೊಲ್ಲಲು ಬಂದಾಗ ಅವನು ಮತ್ತು ಪ್ರೊಫೆಸರ್ ನಡುವೆ ನೆಡೆಯುವ  ಸಂವಾದದಿಂದ ಇಬ್ಬರ ಆಲೋಚನೆ ಮತ್ತು ನಿಲುವುಗಳು ನಾಟಕೀಯವಾಗಿ ಅನಾವರಣಗೊಳ್ಳುತ್ತಾ ಹಿಂಸೆಯಿಂದ ಅಹಿಂಸೆಯ ಕಡೆಗೆ ,ಅಜ್ಞಾನದಿಂದ ಜ್ಞಾನದ ಕಡೆಗೆ ನಡೆಯುವುದನ್ನು ನಾಟಕೀಯವಾಗಿ ಭಗವಂತನ ಸಾವು ನಾಟಕ ಕಟ್ಟಿಕೊಡುತ್ತದೆ .

ಕಳೆದ ಕೆಲವು ವರ್ಷಗಳಿಂದ ನಮ್ಮ ಸಮಕಾಲೀನ ಸಂದರ್ಭದಲ್ಲಿ ನಡೆದ ಹಲವು ಚಿಂತಕರ ಹತ್ಯೆಯ ಘಟನೆಗಳನ್ನು ನೆನಪಿಸುತ್ತಲೇ ನಾಟಕವು ಅದನ್ನು ಮೀರಿ ಹಿಂಸೆ ಮತ್ತು ಅಹಿಂಸೆಯ ನಡುವಿನ ವಾಗ್ವಾದವಾಗಿ ನಾಟಕೀಯವಾಗಿ ವಿಸ್ತರಣೆಗೊಳ್ಳುತ್ತದೆ.

More articles

Latest article

Most read