IPL-2025 ಹರಾಜು ಪ್ರಕ್ರಿಯೆಗೆ ದಿನಾಂಕ ಫಿಕ್ಸ್‌ : ಯಾರು ಯಾವ ತಂಡವನ್ನು ಸೇರಲಿದ್ದಾರೆ?

Most read

ನವದೆಹಲಿ : ಬರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೆಗಾ ಹರಾಜಿಗೆ ದಿನಾಂಕ ನಿಗದಿಯಾಗಿದ್ದು ಇದೆ ನವೆಂಬರ್ 24 ಮತ್ತು 25 ರಂದು ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.

ಪ್ರತಿವರ್ಷದಂತೆ ಈ ಬಾರಿಯೂ ಸಹ ಮೆಗಾ ಹರಾಜಿನಲ್ಲಿ 1,574 ಕ್ರಿಕೆಟಿಗರು ದಾಖಲೆ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಹರಾಜಿನಲ್ಲಿ ಯಾರು ಯಾವ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬುದು ಕುತೂಹಲ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನೋಂದಾಯಿಸಿಕೊಂಡ ಆಟಗಾರರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. 2024ರ ಐಪಿಎಲ್ ಹರಾಜಿನಲ್ಲಿ 1,166 ಆಟಗಾರರು ನೋಂದಾಯಿಸಿಕೊಂಡಿದ್ದರೆ, ಈ ಬಾರಿ ಆ ಸಂಖ್ಯೆ 1,574ಕ್ಕೆ ಏರಿಕೆಯಾಗಿದೆ.

ಈ ವರ್ಷದ 1,574 ಆಟಗಾರರಲ್ಲಿ 1,165 ಆಟಗಾರರು ಭಾರತೀಯರಾಗಿದ್ದರೆ, 409 ಆಟಗಾರರು ವಿದೇಶಿ ಆಟಗಾರರಾಗಿದ್ದಾರೆ. ವಿಶ್ವದಾದ್ಯಂತ ಕ್ರಿಕೆಟ್ ಆಡುವ ದೇಶಗಳ ಆಟಗಾರರು ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ.

ಪ್ರತಿ ಪ್ರಾಂಚೈಸಿಗಳು ಗರಿಷ್ಠ 25 ಆಟಗಾರರ ತಂಡವನ್ನು ಹೊಂದಲು ಅವಕಾಶವಿದೆ. ಒಟ್ಟಾರೆ ಗರಿಷ್ಠ 250 ಆಟಗಾರರು 10 ತಂಡಗಳಲ್ಲಿ ಇರಲು ಅವಕಾಶವಿದ್ದು ಈಗಾಗಲೇ ಎಲ್ಲಾ ತಂಡಗಳಿಂದ 46 ಆಟಗಾರರನ್ನು ರಿಟೈನ್ ಮಾಡಲಾಗಿದೆ. ಇನ್ನು 204 ಕ್ರಿಕೆಟಿಗರಿಗೆ ಮಾತ್ರ ತಂಡಗಳನ್ನು ಸೇರಲು ಅವಕಾಶವಿದೆ.

ಕಳೆದ ವರ್ಷ 1166 ಆಟಗಾರರ ನೊಂದಾಯಿಸಿಕೊಂಡಿದ್ದರು 333 ಹೆಸರುಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗಿತ್ತು. ಈ ಬಾರಿ ಅಂತಿಮವಾಗಿ ಎಷ್ಟು ಆಟಗಾರರು ಹರಾಜಿನಲ್ಲಿ ಇರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಚ್ಚರಿ ಎನ್ನುವಂತೆ ಇಟಲಿಯ ಓರ್ವ ಕ್ರಿಕೆಟಿಗ ಕೂಡ ಈ ಬಾರಿ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ಪರ ಆಡಿದ್ದ ಜೋ ಬರ್ನ್ಸ್ ಎಂದು ಹಲವರು ಭಾವಿಸಿದ್ದರೆ ಆದರೆ ಅವರನ್ನು ಥಾಮಸ್ ಡ್ರಾಕಾ ಎಂದು ಗುರುತಿಸಲಾಗಿದೆ.

ಕಳೆದ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆ ದುಬೈನಲ್ಲಿ ಒಂದು ದಿನಕ್ಕೆ ಸೀಮಿತವಾಗಿತ್ತು. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂಪಾಯಿಗೆ ಕೆಕೆಆರ್ ತಂಡಕ್ಕೆ ಸೇರುವ ಮೂಲಕ ಐಪಿಎಲ್‌ನ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಪ್ಯಾಟ್ ಕಮ್ಮಿನ್ಸ್ 20.50 ಕೋಟಿಗೆ ಸನ್‌ರೈಸರ್ಸ್ ಹೈದರಾಬಾದ್‌ ಪಾಲಾಗಿದ್ದರು. ಅನುಭವಿ ಹ್ಯೂ ಎಡ್ಮೀಡ್ಸ್ ಬದಲಾಗಿ ಮಲ್ಲಿಕಾ ಸಾಗರ್ ಐಪಿಎಲ್‌ನ ಮೊದಲ ಮಹಿಳಾ ಹರಾಜುಗಾರ್ತಿಯಾಗಿದ್ದರು. ಈ ಬಾರಿ ಕೂಡ ಅವರೇ ಹರಾಜುಗಾರ್ತಿಯಾಗುತ್ತಾರಾ ಎಂದು ಕಾದು ನೋಡಬೇಕಾಗಿದೆ.

More articles

Latest article