Saturday, December 7, 2024

ಬೆಂಗಳೂರು ಪಬ್‌ನಲ್ಲಿ ತಡರಾತ್ರಿ ಪಾರ್ಟಿ: ನಟ ದರ್ಶನ್, ಡಾಲಿ, ರಾಕ್ಲೈನ್ ಸೇರಿ ಹಲವರಿಗೆ ಪೊಲೀಸ್ ನೋಟಿಸ್!

Most read

ಕನ್ನಡದ ಜನಪ್ರಿಯ ನಟ ದರ್ಶನ್ ತೂಗುದೀಪ ಮತ್ತು ಇತರ ಹಲವಾರು ಸೆಲೆಬ್ರಿಟಿಗಳು ತಮ್ಮ ಕಾಟೇರ ಚಿತ್ರದ ಯಶಸ್ಸಿನ ಸಂಭ್ರಮಾಚರಣೆ ಮಾಡಲು ಬೆಂಗಳೂರಿನ ಜೆಟ್ ಲ್ಯಾಗ್ ಪಬ್ ನಲ್ಲಿ ನಿಯಮ ಉಲ್ಲಂಘಿಸಿ ಮುಂಜಾನೆವರೆಗೂ ಪಾರ್ಟಿ ಮಾಡಿದ್ದಕ್ಕಾಗಿ ೮ ಮಂದಿಗೆ ಪೋಲೀಸರು ನೋಟಿಸ್ ನೀಡಿದ್ದಾರೆ.

ಜನವರಿ 3 ರಂದು ರಾಜಾಜಿನಗರದ ಜೆಟ್‌ಲಾಗ್ ರೆಸ್ಟೋಬಾರ್‌ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎನ್ನಲಾದ ದರ್ಶನ್, ತರುಣ್ ಸುದೀರ್, ವಿ. ಹರಿಕೃಷ್ಣ,  ಅಭಿಷೇಕ್ ಅಂಬರೀಶ್, ಡಾಲಿ ಧನಂಜಯ್, ನಿನಾಸಂ ಸತೀಶ್ ಮತ್ತು ರಾಕ್‌ಲೈನ್ ವೆಂಕಟೇಶ್ ಅವರಿಗೆ ಸುಬ್ರಹ್ಮಣ್ಯನಗರ ಪೊಲೀಸರು ನೋಟಿಸ್ ನೀಡಿದ್ದಾರೆ.

ರೆಸ್ಟೋಬಾರ್‌ಗಳು ಮಧ್ಯರಾತ್ರಿ 1 ಗಂಟೆಗೆ ಮುಚ್ಚಬೇಕಾಗಿದ್ದರೂ, ಸೆಲೆಬ್ರಿಟಿಗಳು ಜೆಟ್‌ಲಾಗ್‌ನಲ್ಲಿ ಜನವರಿ 4 ರ ಬೆಳಿಗ್ಗೆ 3.15 ರವರೆಗೆ ಪಾರ್ಟಿ ಮಾಡಿದ್ದಾರೆ ಇವರಿಗೆ ಮದ್ಯವನ್ನು ಸರಬರಾಜು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಅದರ ಮ್ಯಾನೇಜರ್ ಪ್ರಶಾಂತ ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯ ಸೆಕ್ಷನ್ 36 ಬಿ ಮತ್ತು 41 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 103 ಮತ್ತು 109 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ .

ನಿಯಮಗಳ ಅರಿವಿದ್ದರೂ ರೆಸ್ಟೋಬಾರ್‌ನಲ್ಲಿ ಏಕೆ ಉಳಿದುಕೊಂಡಿದ್ದೀರಿ ಎಂದು ಪ್ರಶ್ನಿಸಿ ಪೋಲೀಸರು ನೋಟಿಸ್ ನೀಡಿದ್ದಾರೆ.

More articles

Latest article