ನ್ಯಾಯಾಲಯದ ಮುಂದೆ ದರ್ಶನ್ ಗ್ಯಾಂಗ್ ಹಾಜರು: ಇಂದೇ ಜೈಲಿಗೆ ಶಿಫ್ಟ್?

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಾದ ಚಿತ್ರನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ ಎಲ್ಲ ಆರೋಪಿಗಳನ್ನು ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣಕ್ಕೆ ಕರೆತಂದಿದ್ದಾರೆ.

ನಾಳೆಗೆ 24ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯ ನೀಡಿದ್ದ ಪೊಲೀಸ್ ಕಸ್ಟಡಿ ಮುಗಿಯುವ ಹಿನ್ನೆಲೆಯಲ್ಲಿ, ನಾಳೆ ರಜಾದಿನವಾಗಿರುವುದರಿಂದ ಇಂದೇ ದರ್ಶನ್ ಮತ್ತು ಸಹಚರರನ್ನು ಹಾಜರುಪಡಿಸಲಾಗುತ್ತಿದೆ.

ಆರೋಪಿಗಳ ವಿಚಾರಣೆಗೆ ಮತ್ತಷ್ಟು ದಿನಗಳ ಕಾಲ ಪೊಲೀಸ್ ಕಸ್ಟಡಿ ಕೇಳಲಾಗುವುದೇ ಅಥವಾ ವಿಚಾರಣೆ ಮುಗಿದ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕೋರಿಕೊಳ್ಳಲಾಗುವುದೇ ಎಂದು ಕಾದು ನೋಡಬೇಕಿದೆ.

ದರ್ಶನ್ ಅವರ ಪೊಲೀಸ್ ಕಸ್ಟಡಿ ಅಗತ್ಯವಿಲ್ಲದೇ ಇದ್ದಲ್ಲಿ ಇಂದೇ ಅವರು ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಕೋರ್ಟ್ ಬಳಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

More articles

Latest article

Most read