ಬಳ್ಳಾರಿ ತಲುಪಿದ ದರ್ಶನ್ ಜಾಮೀನು ಪ್ರತಿ; ಇಂದೇ ಬಿಡುಗಡೆಯಾಗಲಿದ್ದಾರೆಯೇ ದಾಸ?

Most read

ಬೆಂಗಳೂರು: ದರ್ಶನ್ ಗೆ ಸಿಕ್ಕಿರುವ ಜಾಮೀನು ಆದೇಶದ ಪ್ರತಿ ಬಳ್ಳಾರಿ ಜೈಲು ತಲುಪಿದೆ. ಆದರೆ ಕೆಲವು ನಿಬಂಧನೆಗಳಿರುವುದರಿಂದ ದರ್ಶನ್ ಗೆ ಕೊಂಚ ನಿರಾಶೆಯಾದರೂ ಅಚ್ಚರಿಯಿಲ್ಲ. ಜಾಮೀನು ಸಿಕ್ಕರೂ ದರ್ಶನ್ ಮೈಸೂರು ಪ್ರವೇಶಿಸುವಂತಿಲ್ಲ. ವಿಚಾರಣಾ ಕೋರ್ಟ್ ವ್ಯಾಪ್ತಿ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂಬ ಷರತ್ತು ವಿಧಿಸಿರುವುದರಂದ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯಬೇಕಾದ ಅನಿವಾರ್ಯತೆ ಎದುರಾಗಿದೆ. ಮೈಸೂರಿನಲ್ಲಿ ಚಿಕಿತ್ಸೆ ಪಡೆಯಬೇಕೆಂದು ದರ್ಶನ್ ಬಯಸಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ.
ಕೋರ್ಟ್ ಗೆ ದರ್ಶನ್ ಪಾಸ್ ಪೋರ್ಟ್ ಸಲ್ಲಿಕೆ. ಕೋರ್ಟ್ ಗೆ ಇಬ್ಬರಿಂದ ಶೂರಿಟಿ ಸಲ್ಲಿಕೆ. ಚಿತ್ರ ನಟ ಧನ್ವೀರ್ ಮತ್ತು ದರ್ಶನ್ ಸಹೋದರ ದಿನಕರ್ ತೂಗುದೀಪ ಅವರು ಶೂರಿಟಿ ನೀಡಿದ್ದಾರೆ. ದರ್ಶನ್ ಅವರೇ 2 ಲಕ್ಷ ರೂ ವೈಯಕ್ತಿಕ ಬಾಂಡ್ ಸಲ್ಲಿಸಲಿದ್ದಾರೆ. ದರ್ಶನ್ ಪಾಸ್ ಪೋರ್ಟ್ ಅನ್ನೂ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ಷರತ್ತು ವಿಧಿಸಲಾಗಿದೆ.

ಜಾಮೀನು ಅವಧಿ ಮುಕ್ತಾಯವಾದ ತಕ್ಷಣ ನ್ಯಾಯಾಲಯಕ್ಕೆ ಹಾಜರಾಗಬೇಕು. 2 ಲಕ್ಷ ರೂ.ವೈಯಕ್ತಿಕ ಬಾಂಡ್, ಇಬ್ಬರ ಶ್ಯೂರಿಟಿ ನೀಡಬೇಕು ಜೈಲಿಂದ ರಿಲೀಸ್ ಆದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು. ಆಸ್ಪತ್ರೆಗೆ ದಾಖಲಾದ ದಿನಾಂಕ, ಶಸ್ತ್ರ ಚಿಕಿತ್ಸೆ ಪಡೆದ ದಿನಾಂಕ ಮತ್ತು ಚಿಕಿತ್ಸೆ ಪಡೆದ ವಿವರಗಳನ್ನು ನ್ಯಾಯಾಲಯದ ಗಮನಕ್ಕೆ ತರಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯನಾಶ ಪಡಿಸದಂತೆ ದರ್ಶನ್ ಗೆ ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.
ದರ್ಶನ್ ಪತ್ನಿ ಹೇಳಿದ್ದೇನು?
ದರ್ಶನ್ಗೆ ಬೇಲ್ ಸಿಗುತ್ತಿದ್ದಂತೆ ಅವರ ಪತ್ನಿ ವಿಜಯಲಕ್ಷ್ಮೀ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಪೋಸ್ಟ್ ಸಾಕಷ್ಟು ಗಮನ ಸೆಳೆಯುತ್ತಿದೆ ತಾವು ಈ ಹಿಂದೆ ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದ ಫೋಟೋವನ್ನು ಮತ್ತೊಮ್ಮೆ ಹಂಚಿಕೊಂಡಿದ್ದಾರೆ. ಥ್ಯಾಂಕ್ಫುಲ್, ಗ್ರೇಟ್ಫುಲ್, ಬ್ಲೆಸ್ಡ್ ಎಂದು ಬರೆದುಕೊಂಡಿದ್ದಾರೆ. ದರ್ಶನ್ ಜೈಲಿಗೆ ಹೋದಾಗಿನಿಂದ ಅವರು ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ದೇವರ ಮೊರೆ ಹೋಗಿದ್ದರು.

ದರ್ಶನ್ಗೆ ಜಾಮೀನು ಲಭಿಸಿರುವುದು ಅವರ ಅಭಿಮಾನಿಗಳಿಗೆ ದೀಪಾವಳಿ ಗಿಫ್ಟ್ ಸಿಕ್ಕಂತಾಗಿದೆ. ಚಾಮುಂಡೇಶ್ವರಿ ಫೋಟೋ ಪೋಸ್ಟ್ ಮಾಡಿರುವ ಧನ್ವೀರ್, ಒಳ್ಳೆಯ ಜನರಿಗೆ ಒಳ್ಳೆಯದೇ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ. ವಿಷ್ಣುವರ್ಧನ್ ಅವರ ಹಾಡೊಂದನ್ನು ಸ್ಟೇಟಸ್ ಗೆ ಹಾಕಿಕೊಂಡಿದ್ದಾರೆ. ದರ್ಶನ್ ನಿರಪರಾಧಿಯಾಗಿ ಹೊರ ಬರುತ್ತಾರೆ. ಅವರನ್ನು ಅದೆಷ್ಟೋ ಕುಟುಂಬಗಳು ನಂಬಿಕೊಂಡಿವೆ. ದರ್ಶನ್ ಹೊರಗೆ ಬಂದರೆ ತುಂಬಾ ಅನುಕೂಲವಾಗುತ್ತದ ಎಂದು ಬೆಂಗಳೂರಲ್ಲಿ ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ.
ಅತ್ತ ಬೆಳಗಾವಿಯಲ್ಲಿ ದರ್ಶನ್ ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಹಚ್ಚಿ ಜೈಕಾರ ಹಾಕಿದ್ದಾರೆ.

ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಿ ಪ್ರತಿಕ್ರಿಯಿಸಿ ನ್ಯಾಯಾಲಯದ ಬಗ್ಗೆ ನಮಗೆ ಅಪಾರ ಗೌರವ ಇದೆ. ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಮಂಜೂರಾಗಿದೆ. ಕೊಲೆ ಆರೋಪಿ ದರ್ಶನ್ ಅವರ ಆರೋಗ್ಯ ಚೆನ್ನಾಗಿರಲಿ. ಎಸ್ ಪಿಪಿ ಪ್ರಸನ್ನಕುಮಾರ್ ಉತ್ತಮವಾಗಿ ವಾದ ಮಂಡಿಸಿದ್ದಾರೆ. ಪಾಸ್ ಪೋರ್ಟ್ ವಶಕ್ಕೆ ಪಡೆದು ಮಧ್ಯಂತರ ಜಾಮೀನು ನೀಡಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗುವ ನಂಬಿಕೆ ಇದೆ ಎಂದು ಹೇಳಿದ್ದಾರೆ.

More articles

Latest article