ಡಿ ಗ್ಯಾಂಗ್ ನಿಂದ ಹತ್ಯೆಯಾಗಿದ್ದ ರೇಣುಕಾಸ್ವಾಮಿ ಪತ್ನಿಗೆ ಗಂಡು ಮಗು ಜನನ

ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಕೊಲೆಯಾದ ರೇಣುಕಾಸ್ವಾಮಿ ಪತ್ನಿ ಸಹನಾ ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಲ್ಲದ ಮನೆಯಲ್ಲಿ ಈಗ ಕೊಂಚ ಸಂತಸ ಕಾಣತೊಡಗಿದೆ.

ಚಿತ್ರದುರ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆಯಾಗಿದೆ. ರೇಣುಕಾಸ್ವಾಮಿ ಹತ್ಯೆ ಘಟನೆ ವೇಳೆ ಅವರ ಪತ್ನಿ 5 ತಿಂಗಳ ಗರ್ಭಿಣಿಯಾಗಿದ್ದರು. ಗಂಡನ ಸಾವಿನಿಂದ ಭಾರಿ ಆತಂಕಕ್ಕೀಡಾಗಿದ್ದರು. ರೇಣುಕಾಸ್ವಾಮಿ ಸಾವಿನ ನಂತರ ಆತನ ರೂಪದಲ್ಲಿ ಮನೆಗೆ ಗಂಡು ಮಗು ಮರಳಿ ಬರಬಹುದೆಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಈಗ ಕೊಂಚ ಸಂತಸ ಮೂಡಿಸುವ ಸುದ್ದಿ ಬಂದಿದೆ.. ಅಂತೆಯೇ ರೇಣುಕಾಸ್ವಾಮಿ ಕುಟುಂಬಸ್ಥರ ನಂಬಿಕೆಯಂತೆ ಗಂಡು ಮಗುವಿಗೆ ಸಹನಾ ಜನ್ಮ ನೀಡಿದ್ದಾರೆ.

ಮಾಧುಮಗಳೊಂದಿಗೆ ಪ್ರತಿಕ್ರಿಯಿಸಿದ ರೇಣುಕಾಸ್ವಾಮಿ ತಂದೆ ಕಾಶೀನಾಥ್ ಶಿವನಗೌಡ್ರು ಭಾವುಕರಾಗಿದ್ದಾರೆ. ಬೆಳಿಗ್ಗೆ 6.55ಕ್ಕೆ ಗಂಡು ಮಗುವಿಗೆ ಸಹನ‌ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರು ಆರೋಗ್ಯವಾಗಿದ್ದಾರೆ. ನಮ್ಮ ಸೊಸೆ ಗಂಡು ಮಗುವಿಗೆ ಜನ್ಮ ನೀಡಿರೋದು ಮಗನೇ ಮರಳಿ ಬಂದಷ್ಟು ಸಂತಸವಾಗಿದೆ ಎಂದು ಭಾವುಕರಾಗಿದ್ದಾರೆ.

More articles

Latest article

Most read