ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಅವರ ವಿವಾಹದ ಇಂದಿನ ವೈಶಿಷ್ಠ್ಯತೆಗಳು

Most read

ಮೈಸೂರು: ಖ್ಯಾತ ನಟ ಡಾಲಿ ಧನಂಜಯ ಮತ್ತು ಡಾ. ಧನ್ಯತಾ ಅವರ ವಿವಾಹದ ಶಾಸ್ತ್ರಗಳು ಆರಂಭವಾಗಿವೆ. ಇಂದು ಬಳೆ ಶಾಸ್ತ್ರ, ವಾಗ್ದಾನ ಶಾಸ್ತ್ರ, ಪ್ರಥಮ, ಕಾಲುಂಗುರ ತೊಡಿಸುವುದು ಸೇರಿದಂತೆ ಅನೇಕ ಶಾಸ್ತ್ರಗಳು ಶಾಸ್ತ್ರೋಕ್ತವಾಗಿ ನಡೆದಿವೆ. ಈ ಸಂದರ್ಭದಲ್ಲಿ ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಭಾಗಿಯಾಗಿದ್ದಾರೆ.

ಇಂದು ನಡೆದ ಕಾರ್ಯಕ್ರಮದಲ್ಲಿ ಧನಂಜಯ ಅವರು ಧನ್ಯತಾ ಅವರ ಹಣೆಗೆ ಹೂ ಮುತ್ತು ನೀಡಿದ್ದು ಗಮನ ಸೆಳೆದಿದೆ. ಪರಸ್ಪರ ಹಾರಗಳನ್ನು ಬದಲಾಯಿಸಿಕೊಂಡು ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಧನಂಜಯ ಬಾವಿ ಪತ್ನಿಗೆ ಕಾಲುಂಗುರ ತೊಡಿಸಿದ್ದಾರೆ. ಧನ್ಯತಾ ಅವರು ಧನಂಜಯ ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

More articles

Latest article