ಸೈಬರ್‌ ವಂಚನೆಗಳಿಗೆ ಕಡಿವಾಣ: ನಿಯಂತ್ರಣಕ್ಕೆ ಸೈಬರ್‌ ಕಮಾಂಡ್‌ ಸೆಂಟರ್‌ ಸ್ಥಾಪನೆ

Most read

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಸೈಬರ್‌ ಅಪರಾದಗಳನ್ನು ನಿಯಂತ್ರಿಸಲು ರಾಜ್ಯದಲ್ಲಿ ಸೈಬರ್‌ ಕಮಾಂಡ್‌ ಘಟಕವು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಖಾಸಗಿ ಸಂಸ್ಥೆಯೊಂದರ ಪ್ರತಿನಿಧಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸೈಬರ್‌ ಕಮಾಂಡ್‌ ಘಟಕವನ್ನು ಸ್ಥಾಪಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ನಿನ್ನೆ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಅವರನ್ನು ಕರೆಯಿಸಿಕೊಂಡಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೈಬರ್ ಕಮಾಂಡ್ ಘಟಕ ಅಥವಾ ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ) ರಚನೆಯ ಆದೇಶ ಕೇವಲ ಕಾಗದದಲ್ಲಿ ಉಳಿಯದೆ ಅಸ್ತಿತ್ವಕ್ಕೆ ಬರಬೇಕು. ಈ ಸಂಸ್ಥೆಯು ದೇಶದ ಮೊದಲ ಸೈಬರ್ ಕಮಾಂಡ್ ಘಟಕ ಅಥವಾ ಸೈಬರ್ ಕಮಾಂಡ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದು ಸೂಚನೆ ನೀಡಿತ್ತು.

‘ಸೈಬ‌ರ್ ಅಪರಾಧಗಳನ್ನು ಎದುರಿಸಲು ಮತ್ತು ಸೈಬ‌ರ್ ಭದ್ರತೆಯನ್ನು ಬಲಪಡಿಸಲು ಸ್ಥಾಪಿಸಿರುವ ಸದರಿ ಘಟಕವು, ಹೊಸ ಯುಗದ ತನಿಖಾ ಕೇಂದ್ರಗಳೊಂದಿಗೆ ಹೊಸ ನಮೂನೆಯ ತಾಂತ್ರಿಕ ಯುಗದ ಅಪರಾಧಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ದಾಪುಗಾಲು ಹಾಕಬೇಕು.

ಈ ಘಟಕದ ಅಧಿಕಾರಿಗಳು ಸ್ವತಂತ್ರವಾಗಿ ಮತ್ತು ಅರ್ಥಪೂರ್ಣವಾಗಿ ಕಾರ್ಯನಿರ್ವಹಿಸುವಂತಾಗಬೇಕು. ಆಗ ಮಾತ್ರ ರಾಜ್ಯವು ಸೈಬರ್ ಅಪರಾಧದಗಳಿಂದ ಮುಕ್ತಿ ಹೊಂದಲು ಸಾಧ್ಯ. ಇಂತಹುದೊಂದು ಘಟಕ ಇಲ್ಲದೇ ಹೋದರೆ ಸೈಬರ್ ಅಪರಾಧ ಅಥವಾ ಸೈಬರ್ ವಂಚನೆಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾಮಾನ್ಯ ಜನತೆ ಬಲಿಯಾಲಿದ್ದಾರೆ ಎಂದೂ ತಿಳಿಸಿತು. ನಂತರ ಪೀಠವು ಪ್ರಕರಣವನ್ನು ಇದೇ ತಿಂಗಳ 24ಕ್ಕೆ ಮುಂದೂಡಿತು.

More articles

Latest article