ಗೋಶಾಲೆ ಹೆಸರಲ್ಲಿ ಕೋಟ್ಯಂತರ ಹಣ ಲೂಟಿ| ಕಮಲಾಕರ್ ಭಟ್ಟನ ಮತ್ತೊಂದು ಕರ್ಮಕಾಂಡ

ಶಿವಮೊಗ್ಗ : ಅಕ್ರಮ ಸಂಬಂಧ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಜ್ಯೋತಿಷಿ ಕಮಲಾಕರ ಭಟ್ ನ ಮತ್ತೊಂದು ಕರ್ಮಕಾಂಡ ಬಯಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಕೋಟ್ಯಂತರ ಹಣ, ಎಕರೆಗಟ್ಟಲೆ ಆಸ್ತಿ ಖರೀದಿಸಿರುವ ವಿಚಾರ ಈಗ ಬೆಳಕಿಗೆ ಬಂದಿದೆ , ಶಿವಮೊಗ್ಗ ತಾಲೂಕಿನ ಮುದುವಾಲ ಗ್ರಾಮದಲ್ಲಿ ಕಮಲಾಕರ್ ಭಟ್ 10 ಎಕರೆಗೂ ಹೆಚ್ಚು ಭೂಮಿಯನ್ನು ಖರೀದಿಸಿದ್ದರು ಎನ್ನಲಾಗುತ್ತಿದೆ, ಗೋಶಾಲೆ, ಮಠ, ಮತ್ತು ದೇವಸ್ಥಾನ ನಿರ್ಮಿಸಲು ಬಳಸುವುದಾಗಿ ಹೇಳಿ ಭೂಮಿ ಖರೀದಿಸಿದ್ದರು ಕಮಲಾಕರ್ ಭಟ್. ಆದರೆ, ಸ್ಥಳದಲ್ಲಿ ಗೋವುಗಳಾಗಲೀ, ಸಿಬ್ಬಂದಿಯಾಗಲಿ ಇಲ್ಲ. ಕೇವಲ ಕೆಲವು ಶೆಡ್‌ಗಳು ಮತ್ತು ದೇವಸ್ಥಾನದ ಕಾಮಗಾರಿ ಮಾತ್ರ ನಡೆದಿರುವುದು ಗೊತ್ತಾಗುತ್ತದೆ

ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದೆ ಎಂದು ಹೇಳಿಕೊಂಡಿದ್ದ ಕಮಲಾಕರ್ ಭಟ್, ಕೆಲವೇ ವರ್ಷಗಳಲ್ಲಿ ಅಪಾರ ಆಸ್ತಿ ಸಂಪಾದಿಸಿದ್ದು ಇದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜ್ಯೋತಿಷಿ ಕಮಲಾಕರ್ ಭಟ್ ಸುಚಿತ್ರಾ ಎಂಬ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ನಂತರ ಆಕೆಯ ಪತಿಯ ಅಣ್ಣ ವಸಂತ್ ನಾಯಕ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.

More articles

Latest article

Most read