ಕೋವಿಡ್‌ ಹಗರಣ; ಖರೀದಿ ನನ್ನ ಜವಬ್ದಾರಿಯಾಗಿರಲಿಲ್ಲ: ಡಾ ಸಿ.ಎನ್.ಮಂಜುನಾಥ್

ಬೆಂಗಳೂರು: ನಾನು ಕೋವಿಡ್ ಟಾಸ್ಕ್  ಫೋರ್ಸ್‌ ಮುಖ್ಯಸ್ಥನಾಗಿರಲಿಲ್ಲ. ಕೇವಲ ಸಮಿತಿಯ ಸದಸ್ಯನಾಗಿ ಅನೇಕ ತಜ್ಞರು, ವೈದ್ಯರು ಹಾಗೂ ಅಧಿಕಾರಿಗಳ ಜೊತೆ ಸೇರಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಕೋವಿಡ್ ನಿಯಂತ್ರಣದ ಬಗ್ಗೆ ಮತ್ತು ಮುಂಜಾಗ್ರತಾ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡುವುದಷ್ಟೇ ನನ್ನ ಜವಾಬ್ದಾರಿ ಆಗಿತ್ತು. ಇದನ್ನು ಹೊರತುಪಡಿಸಿ ಯಾವುದೇ ರೀತಿಯ ಹಣಕಾಸಿನ ಜವಾಬ್ದಾರಿಯಾಗಲಿ, ನಿಯಂತ್ರಣವಾಗಲಿ ನನ್ನ ವ್ಯಾಪ್ತಿಗೆ ಬರುತ್ತಿರಲಿಲ್ಲ ಎಂದು ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಾ ಸಿ.ಎನ್.ಮಂಜುನಾಥ್‌ ಸ್ಪಷ್ಟಪಡಿಸಿದ್ದಾರೆ.

ಎಕ್ಸ್‌ ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೆಲವು ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯವಾಗಿ ನನ್ನ‌ ಹೆಸರು  ಪ್ರಸ್ತಾಪವಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಚಿವ ಸಂಪುಟದ ಮಾರ್ಗದರ್ಶನದಲ್ಲಿ ಕೋವಿಡ್‌ ನಿರ್ವಹಣೆ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ. ಆದರೂ ಕೆಲವು ಸಾಮಾಜಿಕ ಜಾಲತಾಣದಲ್ಲಿ ಅನಗತ್ಯವಾಗಿ ನನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿರುವುದು ನನಗೆ ನೋವು ತರಿಸಿದೆ ಎಂದಿದ್ದಾರೆ.

More articles

Latest article

Most read