ನ್ಯಾಯಾಲಯದ ತೀರ್ಪುಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತಿರಬೇಕು : ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್

Most read

ಭಾರತದ ಸುಪ್ರೀಂ ಕೋರ್ಟ್​ನ ಲಾಂಛನದಲ್ಲಿರುವ ಯಥೋ ಧರ್ಮಃ ತತೋ ಜಯಃ ಸಂದೇಶ ಪಾಲಿಸಿದ್ದೇನೆ. ಯಾವತ್ತಿಗೂ ನ್ಯಾಯಾಲಯದ ತೀರ್ಪುಗಳು ಸಾಮಾನ್ಯ ಜನರಿಗೂ ಅರ್ಥವಾಗುವಂತಿರಬೇಕು. ಜನರಿಗೆ ಅರ್ಥವಾಗುವ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆದಿರುವೆ ಎಂಬ ನಂಬಿಕೆ ನನಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದ್ದಾರೆ.

ವೃತ್ತಿ ಜೀವನದಿಂದ ಶನಿವಾರ(ಫೆ.24) ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ವತಿಯಿಂದ ಹೈಕೋರ್ಟ್​ನ ಹಾಲ್ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿ, ಬೆಂಗಳೂರು: ಭಾರತದ ಸುಪ್ರೀಂ ಕೋರ್ಟ್​ನ ಲಾಂಛನದಲ್ಲಿರುವ ಯಥೋ ಧರ್ಮಃ ತತೋ ಜಯಃ ಸಂದೇಶ ಪಾಲಿಸಿದ್ದೇನೆ. ಅದರೊಂದಿಗೆ ನನ್ನ ಇಡೀ ವೃತ್ತಿ ಜೀವನದಲ್ಲಿ ಅದನ್ನು ಪಾಲನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

ನ್ಯಾಯಮೂರ್ತಿಗಳ ಬದುಕು ಒಂದು ರೀತಿಯಲ್ಲಿ ಅರಣ್ಯದಲ್ಲಿ ಏಕಾಂತ ವಾಸಿಯಾದಂತಿದ್ದರೂ, ಈ ಸೇವಾ ಅವಧಿಯಲ್ಲಿ ಜನರಿಗೆ ಅರ್ಥವಾಗುವ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆದಿರುವೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.

ಅಲ್ಲದೆ, ನ್ಯಾಯಾಂಗ ಮೂಲಸೌಕರ್ಯ ಮತ್ತು ರಾಜ್ಯಾದ್ಯಂತ ವ್ಯವಸ್ಥಿತವಾಗಿ ಇ-ಕೋರ್ಟ್ ಪ್ರಾಜೆಕ್ಟ್ ಜಾರಿ ಮಾಡಲು ಎಲ್ಲರ ಜೊತೆಗೂಡಿ ಶ್ರಮಿಸಿದ್ದೇನೆ. ತಂತ್ರಜ್ಞಾನಕ್ಕೆ ತೆರೆದುಕೊಂಡಿರುವುದರಿಂದ ನ್ಯಾಯದಾನ ವ್ಯವಸ್ಥೆಯು ಕ್ರಿಯಾತ್ಮಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ಹಲವಾರು ನವೀನ ಸಕಾರಾತ್ಮಕ ಕ್ರಮಗಳಿಂದ ಸಮಯ ಉಳಿತಾಯವಾಗಿದ್ದು, ದಾವೆದಾರರಿಗೆ ನ್ಯಾಯದಾನ ಸಾಧ್ಯವಾಗಿದೆ ಎಂದು ಹೇಳಿದರು.

ವೃತ್ತಿ ಜೀವನದಲ್ಲಿ ಮಾರ್ಗದರ್ಶನ ಮಾಡಿದ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್ ವೆಂಕಟಾಚಲಯ್ಯ, ದಿವಂಗತ ಭಾರತದ ಸಾಲಿಸಿಟರ್ ಜನರಲ್ ಆಗಿದ್ದ ಸೋಲಿ ಸೊರಾಬ್ಜಿ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸೇರಿದಂತೆ ಹಲವು ಕಾನೂನು ಪಂಡಿತರನ್ನು ದಿನೇಶ್ ಕುಮಾರ್ ಇದೇ ವೇಳೆ ಸ್ಮರಿಸಿದರು.

ಮುಖ್ಯ ನ್ಯಾಯಮೂರ್ತಿ ದಿನೇಶ್​ ಕುಮಾರ್​ 1990ರಲ್ಲಿ ಕಾನೂನು ಪದವಿ ಪಡೆದು ವಕೀಲಿಕೆ ಆರಂಭಿಸಿದ್ದರು. 1998ರಲ್ಲಿ ಕೇಂದ್ರ ಸರ್ಕಾರಿ ವಕೀಲರಾಗಿದ್ದರು. 2003ರಲ್ಲಿ ಕೇಂದ್ರ ಸರ್ಕಾರದ ಹಿರಿಯ ವಕೀಲರಾದರು. ಸಿಬಿಐ, ಬಿಎಸ್‌ಎನ್‌ಎಲ್‌, ಯುಪಿಎಸ್‌ಸಿ, ಯುಜಿಸಿ, ಎಐಸಿಟಿಇ, ಎನ್‌ಸಿಟಿಇ, ಕೆಪಿಟಿಸಿಎಲ್‌, ಕೆಎಸ್‌ಆರ್‌ಟಿಸಿ, ಬೆಸ್ಕಾಂ, ಬಿಡಿಎ ಅನ್ನು ಪ್ರತಿನಿಧಿಸಿದ್ದರು. 2015ರ ಜ.2ರಂದು ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2016ರ ಡಿ.20ರಂದು ಕಾಯಂಗೊಂಡಿದ್ದರು. ಇದೀಗ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡು ಫೆ.24ಕ್ಕೆ ನಿವೃತ್ತರಾಗಿದ್ದಾರೆ.

More articles

Latest article