Tuesday, December 10, 2024

ಕುಂಡದಲ್ಲಿ ಗಾಂಜಾ ಗಿಡ ಬೆಳೆದಿದ್ದ ದಂಪತಿ ಬಂಧನ

Most read

ಬೆಂಗಳೂರು: ಮನೆಯ ಹೂವಿನ ಕುಂಡದಲ್ಲಿ ಗಾಂಜಾ ಗಿಡ ಬೆಳೆಸಿದ್ದ ದಂಪತಿಯನ್ನು ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಊರ್ಮಿಳಾ ಹಾಗೂ ಗುರುಂಗ್ ದಂಪತಿಗಳು ಗಾಂಜಾ ಬೆಳಸಿದ್ದ ಆರೋಪಿಗಳು. ಇಬ್ಬರನ್ನೂ ಪೊಲೀಸರು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.


ಸದಾಶಿವನಗರದ ಎಮ್.ಎಸ್.ಆರ್. ನಗರದಲ್ಲಿ ವಾಸವಾಗಿದ್ದ ದಂಪತಿಯು ಮನೆಯ ಬಾಲ್ಕನಿಯಲ್ಲಿದ್ದ ಕುಂಡದಲ್ಲಿ ಗಾಂಜಾ ಗಿಡ ಬೆಳಸಿದ್ದರು. ಇತ್ತೀಚಿಗೆ ಊರ್ಮಿಳಾ ಮನೆಯ ಬಾಲ್ಕನಿಯಲ್ಲಿ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ಊರ್ಮಿಳಾ ಮಾಡಿದ್ದ ರೀಲ್ಸ್ ನಲ್ಲಿ ಗಾಂಜಾ ಗಿಡ ಕಾಣಿಸಿಕೊಂಡಿದೆ. ಈ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದಾಗ ಗಾಂಜಾ ಗಿಡ ಪತ್ತೆಯಾಗಿದೆ. ವಿವಿಧ ಬಗೆಯ ಹೂ ಗಿಡಗಳ ಮಧ್ಯೆ ಗಾಂಜಾ ಬೆಳೆಸಲಾಗಿತ್ತು. ಪೊಲೀಸರು 54 ಗ್ರಾಂ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

More articles

Latest article