ಇಂದು ಚಂದ್ರದರ್ಶನಕ್ಕೆ ಕ್ಷಣಗಣನೆ: ನಾಳೆಯಿಂದಲೇ ರಂಜಾನ್‌ ಮಾಸಾಚರಣೆ ಆರಂಭ

Most read

ಹೊಸದಿಲ್ಲಿ: ಮುಸ್ಲಿಂ ಸಮುದಾಯ ಕಾತರದಿಂದ ಕಾಯುತ್ತಿರುವ ಚಂದ್ರದರ್ಶನ ಇಂದು ನಡೆಯುವ ಸಂಭವವಿದ್ದು, ಇಂದಿನಿಂದಲೇ ರಂಜಾನ್‌ ಉಪವಾಸ ಮಾಸಾಚರಣೆ ಆರಂಭಗೊಳ್ಳಲಿದೆ.

ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಆಚರಿಸುವ ರಂಜಾನ್‌ ವೃತ ಆರಂಭಕ್ಕೆ ಚಂದ್ರದರ್ಶನ ಆಗಬೇಕಿದ್ದು, ಅದಕ್ಕಾಗಿ ದಕ್ಷಿಣ ಏಷಿಯಾದ ದೇಶಗಳಲ್ಲಿ ಕ್ಷಣಗಣನೆ ಆರಂಭಗೊಂಡಿದೆ.

ಸೌದಿ ಅರೇಬಿಯಾದಲ್ಲಿ ನಿನ್ನೆ (ಭಾನುವಾರ) ಚಂದ್ರದರ್ಶನವಾಗಿದ್ದು, ರಂಜಾನ್‌ ಮಾಸಾಚರಣೆ ಆರಂಭಗೊಂಡಿದೆ. ಚಂದ್ರದರ್ಶನವು ಪ್ರತಿವರ್ಷವೂ ಸೌದಿ ಅರೇಬಿಯಾ, ಯುಎಇ ದೇಶಗಳಲ್ಲಿ ಜರುಗಿದ ನಂತರ ಏಷಿಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಸಂಭವಿಸುವುದು ವಾಡಿಕೆಯಾಗಿದೆ. ಹೀಗಾಗಿ ಮಾ.12ರಿಂದಲೇ ರಂಜಾನ್‌ ಮಾಸ ಆರಂಭಗೊಳ್ಳುವ ಸಾಧ್ಯತೆ ಇದೆ.

ಭಾರತ, ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶ ಸೇರಿದಂತೆ ದಕ್ಷಿಣ ಏಷಿಯಾದ ಹಲವು ದೇಶಗಳಲ್ಲಿ ಇಂದು (ಮಾ.11) ಚಂದ್ರದರ್ಶನವಾಗಲಿದ್ದು, ನಾಳೆಯಿಂದ ಉಪವಾಸ ವೃತಾಚರಣೆ ಆರಂಭಗೊಳ್ಳಲಿದೆ.

ರಂಜಾನ್‌ ಮಾಸದಲ್ಲಿ ಇಸ್ಲಾಂ ಧರ್ಮದ ಅನುಯಾಯಿಗಳು ಕಟ್ಟುನಿಟ್ಟಿನ ಉಪವಾಸವನ್ನು ಕೈಗೊಳ್ಳುತ್ತಾರೆ. ರಂಜಾನ್‌ ಮಾಸದಲ್ಲಿ ಮಾಡುವ ಉಪವಾಸವನ್ನು ಇಸ್ಲಾಂನ ಐದು ಆಧಾರ ಸ್ಥಂಭಗಳಲ್ಲಿ ಒಂದು ಪರಿಗಣಿಸಲಾಗುತ್ತದೆ. ಮುಸ್ಲಿಮರು ಈ ತಿಂಗಳಿನಲ್ಲಿ ಚಂದ್ರದರ್ಶನದ ಆಧಾರದಲ್ಲಿ 29 ಅಥವಾ 30 ದಿನಗಳ ಉಪವಾಸ ಕೈಗೊಳ್ಳುತ್ತಾರೆ. ರಂಜಾನ್‌ ಮಾಸಾಚರಣೆಯ ನಂತರ ಮುಸ್ಲಿಮರು ಈದ್ –ಉಲ್‌ – ಫಿತ್ರ್‌ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.

More articles

Latest article