IPL 2026 ಸಂಭ್ರಮಕ್ಕೆ ಕ್ಷಣಗಣನೆ: ಇಂದು ವೇಳಾಪಟ್ಟಿ ಪ್ರಕಟ, ಮಾರ್ಚ್ 28 ರಿಂದ ಕ್ರಿಕೆಟ್ ಹಬ್ಬ ಆರಂಭ!

ಬೆಂಗಳೂರು: ಕ್ರಿಕೆಟ್ ಪ್ರೇಮಿಗಳ ಬಹುದಿನಗಳ ಕಾಯುವಿಕೆಗೆ ಇಂದು ತೆರೆ ಬೀಳಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ 19ನೇ ಆವೃತ್ತಿಯ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು ಅಂದರೆ ಮಾರ್ಚ್ 11, ಬುಧವಾರ ಸಂಜೆ 7 ಗಂಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಲಿದೆ.

ಇಂದು ಭಾಗಶಃ ವೇಳಾಪಟ್ಟಿ ಮಾತ್ರ ಪ್ರಕಟ:

ಮುಂದಿನ ಕೆಲವು ತಿಂಗಳುಗಳಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವುದರಿಂದ, ಬಿಸಿಸಿಐ ಇಡೀ ಸೀಸನ್‌ನ ವೇಳಾಪಟ್ಟಿಯನ್ನು ಒಟ್ಟಿಗೆ ನೀಡುತ್ತಿಲ್ಲ. ಬದಲಾಗಿ, ಮೊದಲ ಹಂತದಲ್ಲಿ ಆರಂಭದ 20 ದಿನಗಳ ಪಂದ್ಯಗಳ ಪಟ್ಟಿಯನ್ನು ಮಾತ್ರ ಇಂದು ಘೋಷಿಸಲಿದೆ. ಚುನಾವಣಾ ದಿನಾಂಕಗಳು ಪೂರ್ಣ ಪ್ರಮಾಣದಲ್ಲಿ ಘೋಷಣೆಯಾದ ಬಳಿಕ ಉಳಿದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

ಮಾರ್ಚ್28 ರಂದು ಮೆಗಾ ಓಪನಿಂಗ್:

ಐಪಿಎಲ್ 19ನೇ ಆವೃತ್ತಿಯು ಮಾರ್ಚ್28, 2026 ರಂದು ಅಧಿಕೃತವಾಗಿ ಆರಂಭವಾಗಲಿದೆ. ಸಂಪ್ರದಾಯದಂತೆ ಹಾಲಿ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಉದ್ಘಾಟನಾ ಪಂದ್ಯವನ್ನು ಆಡಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಮೊದಲ ಪಂದ್ಯದಲ್ಲಿ RCB ಮತ್ತುCSK ತಂಡಗಳು ಮುಖಾಮುಖಿಯಾಗುವ ಸಾಧ್ಯತೆ ದಟ್ಟವಾಗಿದ್ದು, ಅಭಿಮಾನಿಗಳಲ್ಲಿ ರೋಮಾಂಚನ ಸೃಷ್ಟಿಸಿದೆ.

ಈ ಬಾರಿಯ ಐಪಿಎಲ್ ಶೇಷತೆಗಳು:

  • ಹೆಚ್ಚುವರಿ ಪಂದ್ಯಗಳು: ಈ ಬಾರಿ ಐಪಿಎಲ್ ಇತಿಹಾಸದಲ್ಲೇ ಅತಿ ದೊಡ್ಡ ಸೀಸನ್ ಆಗಿರಲಿದ್ದು, ಪಂದ್ಯಗಳ ಸಂಖ್ಯೆ 74 ರಿಂದ 84ಕ್ಕೆ ಏರಿಕೆಯಾಗಿದೆ.
  • ಧೋನಿ‌ ಕ್ರೇಜ್: ಎಂ.ಎಸ್. ಧೋನಿ ಅವರು ಈ ಪೂರ್ಣ ಸೀಸನ್ ಆಡುವುದು ಖಚಿತವಾಗಿದ್ದು, ಇದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬವಾಗಿದೆ.
  • ಬೆಂಗಳೂರಿಗೆ ಕ್ರಿಕೆಟ್ ವೈಭವ: ಕಳೆದ ವರ್ಷದ ಬಿಕ್ಕಟ್ಟಿನ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಐಪಿಎಲ್ ಮೂಲಕ ಮತ್ತೆ ಕ್ರಿಕೆಟ್ ಕಳೆ ಮರಳುತ್ತಿದೆ.
  • ಗ್ರ್ಯಾಂಡ್ ಫಿನಾಲೆ: ಈ ಬಾರಿಯ ಫೈನಲ್ ಪಂದ್ಯ ಮೇ31, 2026 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

2026ರ ಐಪಿಎಲ್ ಕೇವಲ ಒಂದು ಕ್ರೀಡಾಕೂಟವಾಗಿ ಉಳಿಯದೆ, ಭಾರತೀಯರ ಪಾಲಿಗೆ ಒಂದು ಭಾವನಾತ್ಮಕ ಹಬ್ಬವಾಗಿ ಬದಲಾಗುತ್ತಿದೆ. ಚುನಾವಣೆಯ ಬಿಸಿಯ ನಡುವೆಯೂ ಕ್ರಿಕೆಟ್ ಜ್ವರ ದೇಶಾದ್ಯಂತ ಏರತೊಡಗಿದೆ. ಸಂಜೆ 7 ಗಂಟೆಗೆ ಪ್ರಕಟವಾಗಲಿರುವ ಅಧಿಕೃತ ಪಟ್ಟಿಯು ಯಾವ ತಂಡಕ್ಕೆ ಎಲ್ಲಿ, ಯಾರ ವಿರುದ್ಧ ಸವಾಲು ಎದುರಾಗಲಿದೆ ಎಂಬ ಕುತೂಹಲಕ್ಕೆ ಅಂತಿಮ ತೆರೆ ಎಳೆಯಲಿದೆ. ಕ್ರಿಕೆಟ್ ಪ್ರೇಮಿಗಳೇ, ನಿಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ಸಜ್ಜಾಗಿ!

More articles

Latest article

Most read