Wednesday, May 22, 2024

ಕುವೆಂಪು ಚಿಂತನೆಗಳು ಮತ್ತು ವಿಚಾರಗಳ ಬಗ್ಗೆ ಕೆವಿಎನ್ ಜೊತೆ ಸಂವಾದ

Most read

ಬೆಂಗಳೂರು : ‘ಕುವೆಂಪು ಚಿಂತನೆಗಳು ಮತ್ತು‌ ವಿಚಾರಗಳ’ ಬಗ್ಗೆ ಕನ್ನಡದ ಖ್ಯಾತ ಭಾಷಾಶಾಸ್ತ್ರಜ್ಞರು ವಿಮರ್ಶಕರು ಹಾಗು ಸಂಸ್ಕೃತಿ ಚಿಂತಕರು ಆಗಿರುವ ಕೆ ವಿ ನಾರಾಯಣ್ ಅವರು ನಾಳೆ(24-02-24) ಸಂಜೆ 5:30ಕ್ಕೆ ವಿಷಯ ಮಂಡಿಸಲಿದ್ದಾರೆ.

ಈ ಕಾರ್ಯಕ್ರಮವು ನಗರದ ವಿಜಯನಗರ ಮೆಟ್ರೋ ನಿಲ್ದಾಣದ ಬಳಿ ಇರುವ ಬೀಟಲ್ ಬುಕ್ ಶಾಪ್ ನಲ್ಲಿ‌ ನಡೆಯಲಿದೆ. ‌ರಾಜಕೀಯ ಚರ್ಚಾ ವಿಷಯವಾಗಿರುವ ಕುವೆಂಪು ಚಿಂತನೆಗಳು ಮತ್ತು ವಿಚಾರಗಳ ಬಗ್ಗೆ ಯುವ ಜನರೊಟ್ಟಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ನಾಡಿನ ಯುವಕರು, ಹಿರಿಯರು, ವಿಚಾರ ಪ್ರಿಯರು, ಗೆಳೆಯರೆಲ್ಲ ಒಂದೆಡೆ ಸೇರಲು ಬೀಟಲ್ ಬುಕ್ ಶಾಪ್ ವೇದಿಕೆಯನ್ನು ನಿರ್ಮಿಸಿಕೊಡುತ್ತಿದೆ ಎಂದು ಬೀಟಲ್ ಬುಕ್ ಶಾಪ್ ನ ಮಾಲೀಕರಾದ ಧನಂಜಯ ಹೇಳಿದ್ದಾರೆ.‌

ಸ್ಥಳ:
ಬೀಟಲ್‌ ಬುಕ್‌ ಶಾಪ್
ಎಲ್ ಜೆ ಆರ್ಕೇಡ್
6/E 14 ನೇ ಮುಖ್ಯ ರಸ್ತೆ
ವಿಜಯನಗರ
ಬಸವೇಶ್ವರ ಕಾಲೇಜು ಎದುರು
ಬೆಂಗಳೂರು 560040
9742225779

More articles

Latest article