ಬೆಂಗಳೂರು : ʼಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುವ ಬದಲು ತಾವು ಸಹ ಈ ಗ್ಯಾರಂಟಿಗಳ ಭಾಗ ಎಂಬುದು ತಿಳಿಯದೆ ಗೇಲಿ ಮಾಡುತ್ತಿದ್ದರು. ಇವುಗಳನ್ನು ಗೇಲಿ ಮಾಡುವ ಮೊದಲು ಒಂದು ಕ್ಷಣ ಒಂದು ತಿಂಗಳಿಗೆ ಐದು ಸಾವಿರದಿಂದ ಹತ್ತು ಸಾವಿರ ಆದಾಯದಲ್ಲಿ ನಗರ ಪ್ರದೇಶಗಳಲ್ಲಿ ಬದುಕುವವರ ಬಗ್ಗೆ ಯೋಚಿಸಿದ್ದಿರʼ ಎಂದು ಪ್ರೊ. ಎ. ನಾರಾಯಣ ಪ್ರಶ್ನಿಸಿದರು.
ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಸಮಾವೇಶದಲ್ಲಿ, ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಮತ್ತು ಸಾರ್ವತ್ರಿಕ ಮೂಲ ಆದಾಯ ವಿಚಾರ ಕುರಿತು ಮಾತನಾಡಿದ ಅವರು, ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಕೊಟ್ಟಿರುವ ಬಗ್ಗೆ ಕಾಂಗ್ರೆಸ್ ಪಕ್ಷದ ಶಾಸಕರಿಗೆ ತಪ್ಪು ಮಾಡಿರುವ ಭಾವನೆ ಬಂದಿರುವ ಜೊತೆಗೆ ಅಭಿವೃದ್ಧಿಗೆ ಹಣ ಇಲ್ಲದಾಗಿದೆ ಎಂದು ಅಭಿಪ್ರಾಯ ಪಡುತಿದ್ದಾರೆ. ಅವರಿಗೆ ಅಭಿವೃದ್ಧಿ ಎಂದರೆ ಏನು? ಎಂದ್ ಪ್ರಶ್ನೆಕೇಳುವ ಸಂದರ್ಭವಿದು ಎಂದರು.
ನಮ್ಮ ಸಮಾಜದಲ್ಲಿ ನಾವು ಯೋಚಿಸುವ ಶಕ್ತಿಯನ್ನು ಕಳೆದುಕೊಂಡಿದ್ದೆ. ಕಳೆದ ಕೆಲವು ದಿನಗಳ ಹಿಂದೆ ಮಗ ಸತ್ತಿರುವ ಮುಂದೆನೆ ತಾಯಿ ಗ್ಯಾರಂಟಿ ಯೋಜನೆಗಳನ್ನು ನೆನಪಿಸಿಕೊಂಡಿದ್ದನ್ನು ನಮ್ಮ ಪತ್ರಿಗಳು ಎರಡು ರೀತಿಯಲ್ಲಿ ವರದಿ ಮಾಡಿವೆ ಎಂದರು. ಕ್ರಮವಾಗಿ, ʼಯಾಕಪ್ಪ ನನ್ನ ಬಿಟ್ಟು ಹೋದೆ, ಸರ್ಕಾರ ಕೊಡುವ ಗೃಹ ಲಕ್ಷೀ ಯೋಜನೆಯ 2000 ದಿಂದ ನಿನ್ನನ್ನು ಸಾಕುತ್ತೇನೆʼ ಮತ್ತು ʼಹೇಗೂ ಸರ್ಕಾರ 2000 ಕೊಡುತ್ತದೆ ಅಂತ ನನ್ನನ್ನು ಬಿಟ್ಟು ಹೋದೆಯಾʼ ಎಂದು ಹೇಳಿದರು.
ʼಶಕ್ತಿ ಯೋಜನೆ ಜಾರಿಗೆ ಬಂದ ಮೊದಲ ದಿನ ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಬಸ್ಸಿನ ಫುಟ್ ಬೋರ್ಡ್ ಗೆ ಕೈ ಮುಗಿದು ಬಸ್ಸನ್ನು ಹತ್ತಿದ್ದು ನೆನಪಿಸಿಕೊಂಡುರು. ಈ ರೀತಿಯ ದೃಶ್ಯಗಳು ನಟನೆ ಅಲ್ಲ. ಇದನ್ನು ನಟನೆ ಎಂದು ತಿಳಿದರೆ ಅವರಂತಹ ಮೂರ್ಖರು ಮತ್ತೊಬ್ಬರಿಲ್ಲ ಮತ್ತು ಆ ವೃದ್ದ ತಾಯಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳದಿರುವ ಸೂಕ್ಷ್ಮತೆಯನ್ನು ಈ ಸಮಾಜ ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂವಿಧಾನವನ್ನು ಬರೆದವರಿಗೆ ಸಮಾಜದ ಬಗ್ಗೆ ಸೂಕ್ಷ್ಮತೆ ಇತ್ತು. 70 ವರ್ಷದಲ್ಲಿ ಸಂವಿಧಾನವನ್ನು ನಮ್ಮ ಹೊಸ ತಲೆಮಾರಿಗೆ ತಿಳಿಸದೆ ಇರುವ ನಮ್ಮ ತಪ್ಪಿಗೆ ಇಂದು ಮುಕ್ತಾಯವಾಗಲಿದೆ. ಈ ರೀತಿಯ ಕಾರ್ಯಕ್ರಮಗಳಿಂದ ಸಂವಿಧಾನದ ಅರಿವು ನಮ್ಮ ಹೊಸ ಪೀಳಿಗೆಗೆ ತಲುಪುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರಕೃತಿ ಪ್ರಪಂಚದಲ್ಲಿ ಎಲ್ಲರಿಗೂ ಸಮಾನವಾಗಿ ಏನನ್ನು ನೀಡಿಲ್ಲ. ನಾವು ಉಸಿರಾಡುವ ಗಾಳಿ ಸೇರಿದಂತೆ ನಮಗೆ ಯಾವುದು ಸಮಾನವಾಗಿ ನೀಡಿಲ್ಲ. ಜಗತ್ತಿನಲ್ಲಿ ಎಲ್ಲೆಲ್ಲಿ ಪ್ರಜಾತಂತ್ರದ ಹಕ್ಕು ಇದೆ ಅಲ್ಲಿ ಸಮಾನವಾಗಿ ಸಿಕ್ಕಿರುವ ಒಂದು ಅಂಶ ಎಂದರೆ ಅದು ಮತದಾನದ ಹಕ್ಕು. ಭಾರತದಲ್ಲಿ ಆ ಮತದಾನದ ಹಕ್ಕನ್ನು ಕೊಟ್ಟಿದ್ದು ಸಂವಿಧಾನ, ಬಾಬಾಸಾಹೇಬ್ ಅಂಬೇಡ್ಕರ್ ಎಂದರು. ಈ ಮೂಲಕ ಆಳುವ ಪಕ್ಷ ಆಳುವ ಸರ್ಕಾರ ಶ್ರೀಮಂತರ ಮೇಲೆ ಎಷ್ಟು ಅವಲಂಬಿಸಬೇಕೋ ಅಷ್ಟೇ ಬಡವರ ಮೇಲೂ ಅವಲಂಬಿಸುವಂತೆ ಸಂವಿಧಾನ ಮಾಡಿತು.
ಹೊಸ ಶಿಕ್ಷಣ ನೀತಿಯಲ್ಲಿ ಮೊದಲು ಸಂವಿಧಾನದ ಅರಿವನ್ನು ಅಳವಡಿಸಬೇಕು. ಯಾರ್ಯಾರು ಸರ್ಕಾರದ ಯಾವುದೇ ಯೋಜನೆಗಳ ಲಾಭವನ್ನು ಪಡೆದಿರುತ್ತಾರೋ ಅದಕ್ಕೆ ಕಾರಣವೇ ನಮ್ಮ ಸಂವಿಧಾನ. ಈ ಸತ್ಯವನ್ನು ಅವರಿಗೆ ತಿಳಿಸುವಲ್ಲಿ ಈ ಸಮಾವೇಶದ ಸಾರ್ಥಕತೆ ಇದೆ ಎಂದರು.