ಕಾಂಗ್ರೆಸ್‌ ರಣತಂತ್ರ: ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಮುಖಂಡರ ಸಭೆ ಪ್ರಾರಂಭ

Most read

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲನೇ ಹಂತದ ಚುನಾವಣೆ ಏಪ್ರಿಲ್ 26 ರಂದು ನಡೆಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯ ಕೆಲಸವೂ ಮುಕ್ತಾಯಗೊಂಡಿದೆ. ಎರಡನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ. ಎರಡನೇ ಹಂತದಲ್ಲಿ ಚುನಾವಣೆ ನಡೆಯುವ ಕ್ಷೇತ್ರಗಳ ಮುಖಂಡರ ಸಭೆಯನ್ನು ಇಂದು ಕಾಂಗ್ರೆಸ್‌ ಪಕ್ಷ ನಡೆಸುತ್ತಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಭೆ ಪ್ರಾರಂಭವಾಗಿದ್ದು, 14 ಲೋಕಸಭಾ ಕ್ಷೇತ್ರಗಳ ನಾಯಕರ ಜೊತೆಗೆ ಸಿಎಂ, ಡಿಸಿಎಂ ಸಭೆ ನಡೆಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಆಯೋಜನೆಗೊಂಡಿರುವ ಈ ಮಹತ್ವದ ಸಭೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದೆ.

ಸಭೆಯಲ್ಲಿ ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಶಾಸಕರು, ಕೆಪಿಸಿಸಿ ಪದಾಧಿಕಾರಿಗಳು ಉಪಸ್ಥಿತರಿದ್ದಾರೆ. ಸಚಿವ ಎಂಬಿ ಪಾಟೀಲ್ ,ಸತೀಶ್ ಜಾರಕಿಹೊಳಿ, ಹೆಚ್.ಕೆ ಪಾಟೀಲ್, ಈಶ್ವರ ಖಂಡ್ರೆ, ಜಮೀರ್ ಅಹ್ಮದ್, ಶಿವಾನಂದ ಪಾಟೀಲ್, ಲಕ್ಷ್ಮಣ್ ಸವದಿ, ಸಂತೋಷ ಲಾಡ್, ನೂತನ ಕಾರ್ಯಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಲೋಕಸಭೆ ಚುನಾವಣೆ ಗೆಲ್ಲುವ ರಣತಂತ್ರ ರೂಪಿಸುವುದು, ರಾಜಕೀಯ ಸಮಾವೇಶಗಳ ಆಯೋಜನೆ, ರಾಷ್ಟ್ರೀಯ ನಾಯಕರ ಆಗಮನದ ವಿಚಾರಗಳು ಸೇರಿದಂತೆ ಪ್ರಮುಖ ವಿಚಾರಗಳು ಚರ್ಚೆ ನಡೆಯುತ್ತಿದೆ.

ಈ ಕೆಳಕಂಡ 14 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದ ಮುಖಂಡರ ಸಭೆ ಈಗ ನಡೆಯುತ್ತಿದೆ.

  • ಧಾರವಾಡ
  • ಉತ್ತರ ಕನ್ನಡ
  • ಶಿವಮೊಗ್ಗ
  • ದಾವಣಗೆರೆ
  • ಹಾವೇರಿ
  • ಬಾಗಲಕೋಟೆ
  • ಬೀದರ್
  • ವಿಜಯಪುರ
  • ಕಲಬುರಗಿ
  • ಬಳ್ಳಾರಿ
  • ಕೊಪ್ಪಳ
  • ರಾಯಚೂರು
  • ಬೆಳಗಾವಿ
  • ಚಿಕ್ಕೋಡಿ

More articles

Latest article