ಕಾಂಗ್ರೆಸ್ ಕಾರ್ಯಕರ್ತರಿಗೆ ಗುಡ್ ನ್ಯೂಸ್: 44 ಮಂದಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೇಮಕ

Most read

ತಿಂಗಳ ಹಿಂದಷ್ಟೇ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದ್ದ ಕರ್ನಾಟಕ ಕಾಂಗ್ರೆಸ್ ಸರ್ಕಾರ (Congress Government) ಇದೀಗ ಕಾರ್ಯಕರ್ತರಿಗೂ (Congress workers) ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಹಂಚಿಕೆಯಾಗಿದೆ.

ಪಕ್ಷದ 44 ಮಂದಿ ಕಾರ್ಯಕರ್ತರಿಗೆ ನಿಗಮ ಮಂಡಳಿ (Corporation Board) ಅಧ್ಯಕ್ಷ ಸ್ಥಾನ ನೀಡಿ ಆದೇಶ ಹೊರಡಿಸಿದೆ. ಇದರೊಂದಿಗೆ ಬಹಳಷ್ಟು ಸಮಯದಿಂದ ನನೆಗುದಿಗೆ ಬಿದ್ದಿದ್ದ ನಿಗಮ ಮಂಡಳಿ ನೇಮಕ ಪ್ರಹಸನಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ.

ಯಾರಿಗೆ ಯಾವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ?

  1. ಆರ್. ಎಂ ಮಂಜುನಾಥಗೌಡ- ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ.
  2. ಜಯಣ್ಣ – ಅನುಸೂಚಿತ ಜಾತಿಗಳು & ಅನುಸೂಚಿತ ಬುಡಕಟ್ಟುಗಳ ಆಯೋಗ.
  3. ಆರ್. ಸಂಪತ್ ರಾಜ್- ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ.
  4. ಪದ್ಮಾವತಿ – ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷ.
  5. ಶ್ರೀನಿವಾಸ್ –ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಅಧ್ಯಕ್ಷ.
  6. ಶಾಕಿರ್ ಸನದಿ- ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ.
  7. ಸೋಮಣ್ಣ ಬೇವಿನಮರದ- ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ.
  8. ಮೆಹಬೂಬ್ ಪಾಷಾ- ಕಂಠೀರವ ಸ್ಟುಡಿಯೋ ಅಧ್ಯಕ್ಷ.
  9. ಕೀರ್ತಿ ಗಣೇಶ್- ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ.
  10. ಮಜರ್ ಖಾನ್- ದೇವರಾಜ್ ಅರಸು ಟ್ರಕ್ ಟರ್ಮಿನಲ್ ಅಧ್ಯಕ್ಷ.
  11. ಸವಿತಾ ರಘು – ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷೆ.
  12. ಲಿಲಿತ್ ರಾಘವ್- ಕರ್ನಾಟಕ ವಿದ್ಯುತ್ ಕಾರ್ಖಾನೆ ಅಧ್ಯಕ್ಷ.
  13. ಜಿ.ಎಸ್ ಮಂಜುನಾಥ್- ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ.
  14. ಮಾಲಾ ನಾರಾಯಣರಾವ್ – ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ.
  15. ರಿಜ್ವಾನ್- ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಅಧ್ಯಕ್ಷ.
  16. ಕೇಶವ ರೆಡ್ಡಿ – ಚಿಕ್ಕಬಳ್ಳಾಪುರ ನಗಾರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ.
  17. ತಾಜ್ ಪೀರ್ – ಚಿತ್ರದದುರ್ಗ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ.
  18. ಗಂಗಾಧರ್ – ಮೈಸೂರು ಸಕ್ಕರೆ ಕಾರ್ಖಾನೆ ಅಧ್ಯಕ್ಷ.
  19. ಅಲ್ತಾಫ್- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಅಧ್ಯಕ್ಷ.
  20. ಮರೀಗೌಡ ಯಾದಗಿರಿ- ರಾಜ್ಯ ತೊಗರಿ ಅಭಿವೃದ್ಧಿ.
  21. ಕಾಂತಾ ನಾಯ್ಕ- ಅಧ್ಯಕ್ಷೆ, ಕೌಶಲ್ಯ ಅಭಿವೃದ್ಧಿ.
  22. ನಾಗಲಕ್ಷ್ಮೀ ಚೌಧರಿ- ಅಧ್ಯಕ್ಷರು, ಮಹಿಳಾ ಆಯೋಗ.
  23. ಆಂಜನೇಯಲು – ಬಳ್ಳಾರಿ ನಗರಾಭಿವೃದ್ಧಿ.
  24. ಕೆ.ಮರಿಗೌಡ –ಅಧ್ಯಕ್ಷ, ಮೈಸೂರು ನಗರಾಭಿವೃದ್ಧಿ.
  25. ವಿನೋದ್ ಅಸೂಟಿ- ಉಪಾಧ್ಯಕ್ಷ, ಕ್ರೀಡಾಪ್ರಾಧಿಕಾರ.
  26. ಮಮತಾ ಗಟ್ಟಿ- ಗೇರು ಅಭಿವೃದ್ಧಿ ನಿಗಮ.
  27. ಮುಂಡಗರಿ ನಾಗರಾಜು- ಜಗಜೀವನ್ ರಾಂ ನಿಗಮ.
  28. ಬಿ.ಹೆಚ್. ಹರೀಶ್, ಕೃಷಿ ಉತ್ಪನ್ನ ಸಂಸ್ಕರಣೆ.
  29. ಡಾ. ಅಂಶುಮಂತ್- ಭದ್ರಾ ಕಾಡಾ, ಶಿವಮೊಗ್ಗ.
  30. ಡಾ. ಬಿ ಯೋಗೇಶ್ ಬಾಬು- ದ್ರಾಕ್ಷಾರಸ ಮಂಡಳಿ.
  31. ಜಯಸಿಂಹ – ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ
  32. ವಿಜಯ್ ಕೆ.ಮುಳುಗುಂದ್ – ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ
  33. ಮರಿಸ್ವಾಮಿ ಚಾಮರಾಜನಗರ – ಕಾಡಾ ಅಧ್ಯಕ್ಷ
  34. ಸದಾಶಿವ ಉಲ್ಲಾಳ್ – ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ
  35. ರಘುನಂದನ್ ರಾಮಣ್ಣ – ಬಿಎಂಐಸಿಎಪಿಎ ಅಧ್ಯಕ್ಷ
  36. ಬಸವರಾಜ್ ಜಾಬಶೆಟ್ಟಿ – ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
  37. ಸಾಧು ಕೋಕಿಲ – ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

ಸರ್ಕಾರದ ಐತಿಹಾಸಿಕ ಐದು ಗ್ಯಾರಂಟಿ ಸ್ಕೀಂ ಗಳ ಅನುಷ್ಠಾನ ಸಮಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಿತಿಗೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ.

ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರು ಅಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹೊಂದಿದ್ದಾರೆ.

ಉಪಾಧ್ಯಕ್ಷರಾಗಿ ಮೆಹರೂಜ್ ಖಾನ್, ಪುಷ್ಪ ಅಮರನಾಥ್, ಎಸ್.ಆರ್.ಪಾಟೀಲ್ ಮತ್ತು ಸೂರಜ್ ಹೆಗ್ಡೆ ಅವರ ಹೆಸರನ್ನು ಮಾನ್ಯ ಮುಖ್ಯಮಂತ್ರಿಗಳು ಅನುಮೋದಿಸಿದ್ದಾರೆ.

ಎನ್.ಎ.ಹ್ಯಾರಿಸ್, ಕೆಎಂ ಶಿವಲಿಂಗೇಗೌಡ, ವಿನಯ್ ಕುಲಕರ್ಣಿ ಸೇರಿದಂತೆ ಒಟ್ಟು 32 ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಜನವರಿ 26ರಂದು ರಾಜ್ಯ ಸರ್ಕಾರ ನೇಮಕ ಮಾಡಿತ್ತು.

.

More articles

Latest article