ಬೆಂಗಳೂರು: ಬಹಿರಂಗ ಪ್ರಚಾರ ತೆರೆಬೀಳುವ ಕೊನೆಯ ದಿನವಾದ ಇಂದು ಜನರ ನಡುವೆ ನಿರಂತರ ಮತಯಾಚನೆಯಲ್ಲಿ ತೊಡಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಅವರು ಜನರನ್ನು ಸೆಳೆಯುವ ಕೊನೆಗಳಿಗೆಯ ಪ್ರಯತ್ನವನ್ನು ಮಾಡಿದ್ದಾರೆ.
ಈ ವೇಳೆ ಜನರ ಬಳಿ ಮನವಿ ಮಾಡಿದ ಸೌಮ್ಯಾ ಅವರು, ಬೆಂಗಳೂರಿನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಮಂಡಿಸಿ ಪರಿಹಾರ ನೀಡುತ್ತೇವೆ ಎನ್ನುವ ಭರವಸೆಯನ್ನು ನೀಡಿದರು.
“ನಾನು ಬೆಂಗಳೂರಲ್ಲೇ ಹುಟ್ಟಿ ಬೆಳೆದವಳು. ಬೆಂಗಳೂರು ಹೇಗಿತ್ತು ಹೇಗಾಯ್ತು ಅಂತ ಈಗ ಮಾತನಾಡ್ತೇವೆ. ಬೆಂಗಳೂರಿಗೆ ಎಲ್ಲ ಕಡೆಯಿಂದ ಜನ ಬರ್ತಾರೆ. ಬೆಂಗಳೂರು ಐಟಿ ಕ್ಯಾಪಿಟಲ್ ಆಗಿದೆ. ಇದರಿಂದ ಸಮಸ್ಯೆಗಳು ಹೆಚ್ಚಾಗಿವೆ. ಟ್ರಾಫಿಕ್, ನೀರಿನ ಸಮಸ್ಯೆ ಕೂಡ ಹೆಚ್ಚಿದೆ. ನಗರ ಬೆಳೆಯುತ್ತಿರುವುದರಿಂದ ಸಮಸ್ಯೆ ಇದೆ. ಪರಿಸರ ವ್ಯವಸ್ಥೆ ಬಗ್ಗೆ ನಾವು ಓದಿರ್ತೇವೆ. ಸೀವೇಜ್ ವಾಟರ್ ಟ್ರೀಟ್ ನಡೆಯುತ್ತಿದೆ. ನೀರನ್ನ ಟ್ರೀಟ್ ಮಾಡಿ ಮರುಬಳಕೆ ಮಾಡಬಹುದು. ಇದರ ಕಡೆ ನಾವು ಗಮನಹರಿಸಬೇಕಿದೆ.
ಬೆಂಗಳೂರಿನ ಸುಂದರ ಪರಿಸರದಿಂದಾಗಿ ಇಲ್ಲಿಗೆ ಬಂದವರು ವಾಪಸ್ ಹೋಗಲ್ಲ. ಆದರೆ ಈ ವಾತಾವರಣ ಬೆಂಗಳೂರಿನಲ್ಲಿ ಬದಲಾಗುತ್ತಿದೆ. 15 ವರ್ಷದ ಹಿಂದೆ ಎಸಿಗಳು ಇರಲಿಲ್ಲ. ಇವತ್ತು ಎಸಿ, ಫ್ಯಾನ್ ಇರಲೇಬೇಕು. ಅಷ್ಟರ ಮಟ್ಟಿಗೆ ವಾತಾವರಣ ಬದಲಾಗಿದೆ. ಇಕೋ ಸಿಸ್ಟಂ ಅನ್ನ ನಾವು ಅಳವಡಿಸಿಕೊಳ್ಳಬೇಕಿದೆ ಎಂದಿದ್ದಾರೆ.