Sunday, September 8, 2024

6 ರಾಜ್ಯಗಳ 8 ಲೋಕಸಭಾ ಕ್ಷೇತ್ರಗಳಲ್ಲಿ ಇವಿಎಂ ಪರಿಶೀಲನೆಗೆ ಕೋರಿ ಚುನಾವಣಾ ಆಯೋಗಕ್ಕೆ ದೂರು

Most read

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕಳೆದ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ ಪರಿಶೀಲನೆಗಾಗಿ 8 ಅರ್ಜಿಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾಗಿವೆ.

6 ರಾಜ್ಯಗಳಿಂದ ಒಟ್ಟು 8 ದೂರುಗಳು ಸಲ್ಲಿಕೆಯಾಗಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಚುನಾವಣಾ ಆಯೋಗ ಇವಿಎಂಗಳನ್ನು ತಿರುಚಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕಿದೆ.

ಅಭ್ಯರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಇವಿಎಂ ಮೆಷಿನ್ ನಲ್ಲಿ ಬಳಸಲಾಗುವ ಮೈಕ್ರೋ ಕಂಟ್ರೋಲರ ಚಿಪ್ ಗಳನ್ನು ತಿರುಚಲಾಗಿದೆಯೇ ಎಂಬ ಪರಿಶೀಲನೆ ನಡೆಯಲಿದೆ.

ಆಶ್ಚರ್ಯವೆಂದರೆ ಬಿಜೆಪಿ ಅಭ್ಯರ್ಥಿಗಳು ಸಹ ಇವಿಎಂ ತಿರುಚಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿದವರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೂ ಇದ್ದಾರೆ.

ಇವಿಎಂ ತಿರುಚುವಿಕೆ ಸಂಬಂಧ ಸಲ್ಲಿಕೆಯಾಗಿದ್ದ ಹಲವಾರು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಇವಿಎಂ ಬದಲಿಗೆ ಹಿಂದಿನಂತೆ ಬ್ಯಾಲೆಟ್ ಪೇಪರ್ ಬಳಸುವಂತೆ ಕೋರಿದ್ದ ಮನವಿಗಳನ್ನು ತಿರಸ್ಕರಿಸಿತ್ತು.

ಆದರೆ ಚುನಾವಣೆಯಲ್ಲಿ ಎರಡು ಅಥವಾ ಮೂರನೇ ಸ್ಥಾನದಲ್ಲಿ ಸೋತ ಅಭ್ಯರ್ಥಿಗಳು ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಶೇ 5ರಷ್ಟು ಇವಿಎಂಗಳ ಮೈಕ್ರೋ ಕಂಟ್ರೋಲರ್ ಚಿಪ್ ಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಚುನಾವಣಾ ಸಮಿತಿ ನಿಗದಿಪಡಿಸುವ ಶುಲ್ಕವನ್ನು ಭರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಇದೇ ಅವಕಾಶವನ್ನು ಬಳಸಿಕೊಂಡು 8 ಪರಾಜಿತ ಅಭ್ಯರ್ಥಿಗಳು ಇದೀಗ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ.

More articles

Latest article