ನವದೆಹಲಿ: ಇಂಡಿಯನ್ ಆಯಿಲ್ ಸೇರಿದಂತೆ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ದರಗಳನ್ನು ಇಳಿಸುವ ಮೂಲಕ ಹೊಸ ವರ್ಷದ ಕೊಡುಗೆ ನೀಡಿವೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಬೆಲೆ ಕಡಿಮೆಯಾಗಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 14.5೦ ರೂನಿಂದ 16 ರೂವರೆಗೆ ಇಳಿಕೆ ಆಗಿದೆ. ಬೆಂಗಳೂರಿನಲ್ಲಿ 14.5೦ ರೂನಷ್ಟು ಇಳಿಕೆ ಆಗಿದೆ. ಇನ್ನು, 47 ಕಿಲೋ ವಾಣಿಜ್ಯ ಸಿಲಿಂಡರ್ ಬೆಲೆ 36.50 ರೂ.ಗಳಷ್ಟು ಕಡಿಮೆಯಾಗಿದೆ. ಆದರೆ, ಗೃಹ ಬಳಕೆಯ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.
ವಾಣಿಜ್ಯ ಸಿಲಿಂಡರ್ಗಳ ಬೆಲೆ ಆರು ತಿಂಗಳ ನಂತರ ಮೊದಲ ಬಾರಿಗೆ ಇಳಿಕೆ ಮಾಡಲಾಗಿದೆ. 14.2 ಕಿಲೋ ಮತ್ತು 5 ಕಿಲೋ ಎಲ್ಪಿಜಿ ಸಿಲಿಂಡರ್ಗಳು ಗೃಹಬಳಕೆಗೆ ಸೀಮಿತವಾಗಿವೆ. 19 ಕಿಲೋ ಮತ್ತು 47 ಕಿಲೋ ಸಿಲಿಂಡರ್ಗಳು ವಾಣಿಜ್ಯ ಬಳಕೆಗೆ ನಿಗದಿಯಾಗಿವೆ.