ದೆಹಲಿ: 19 ಕೆ.ಜಿ. ವಾಣಿಜ್ಯ ಸಿಲಿಂಡರ್ ನ ಬೆಲೆ 6 ರೂಗಳಷ್ಟು ಹೆಚ್ಚಿಸಲಾಗಿದೆ. ಇಂದಿನಿಂದಲೇ ಬೆಲೆ ಏರಿಕೆ ಜಾರಿಯಾಗಲಿದೆ. ಹಬ್ಬ ಮತ್ತು ಮದುವೆಗಳ ಸೀಸನ್ ಆರಂಭವಾಗುತ್ತಿದ್ದು, ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.
ಇಂಡಿಯನ್ ಆಯಿಲ್ ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 6 ರೂ. ಹೆಚ್ಚಿಸಿದ್ದು, ಈ ಹಿಂದೆ 1797 ರೂ. ಇದ್ದ ಪ್ರತಿ ಸಿಲಿಂಡರ್‌ಗೆ 1803 ರೂ.ಗೆ ಏರಿಕೆಯಾಗಿದೆ. ಸರ್ಕಾರಿ ತೈಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪರಿಶೀಲಿಸುವುದು ವಾಡಿಕೆಯಾಗಿದೆ.
ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು 1797 ರೂ.ಗಳಿಂದ 1803 ರೂ.ಗಳಿಗೆ, ಕೋಲ್ಕತ್ತಾದಲ್ಲಿ ಹೊಸ ಬೆಲೆ 1907 ರೂ.ಗಳಿಂದ 1913 ರೂ.ಗಳಿಗೆ, ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1749.50 ರೂ.ಗಳಿಂದ 1755.50 ರೂ.ಗಳಿಗೆ ಮತ್ತು ಚೆನ್ನೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಗ್ಯಾಸ್ ಈಗ 1959 ರೂ.ಗಳಿಂದ 1965 ರೂ.ಗಳಿಗೆ ಹೆಚ್ಚಳವಾಗಿದೆ.
ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿರುವುದರಿಂದ ರೆಸ್ಟೋರೆಂಟ್‌ಗಳಲ್ಲಿ ಊಟ ತಿಂಡಿ ಬೆಲೆ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.