ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡೊವರೆಗೂ ಹೋರಾಟ ಮುಂದುವರೆಯುತ್ತೆ : ನಿಖಿಲ್ ಕುಮಾರಸ್ವಾಮಿ

Most read

ವಾಲ್ಮೀಕಿ ಹಗರಣ ದೇಶದ ಇತಿಹಾಸ ದಲ್ಲೇ ಬ್ಯಾಂಕ್ ಟ್ರಾನ್ಸಾಕ್ಷನ್ ಮೂಲಕ ನಡೆದಿರೋ ಅವ್ಯವಹಾರವಾಗಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಇಲ್ಲಾ ಅಂದ್ರೆ ಹೋರಾಟ ಮುಂದುವರೆಯುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ವಾಲ್ಮೀಕಿ ಮತ್ತು ಮೂಡಾ ಹಗರಣಗಳ ವಿರುದ್ಧ 2ನೇ ದಿನದ ಬಹಿರಂಗ ಸಭೆಯಲ್ಲಿ ಮಾತನಾಡಿದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕೆಂಗೇರಿಯಿಂದ ಬಿಡದಿಯವರಿಗೆ ಎರಡು ಪಕ್ಷದ ಕಾರ್ಯಕರ್ತರು ನಮ್ಮ ಹೆಗಲಿಗೆ ಹೆಗಲು ಕೊಟ್ಟು, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ಪಾದಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದೀರಿ, ನಮಗೆ ಹುಮ್ಮಸ್ಸು ಕೊಟ್ಟಿದ್ದೀರಿ ಎಂದರು..

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸಿದ್ದರಾಮಯ್ಯನವರು ಸಮಾಜವಾದಿ ಅಂತಾರೆ, ಆದ್ರೆ ಮಜವಾದ ಕೆಲಸ ಮಾಡುತ್ತಿದ್ದಾರೆ.. ವಾಲ್ಮೀಕಿ ಹಗರಣ ದೇಶದ ಇತಿಹಾಸ ದಲ್ಲೇ ಬ್ಯಾಂಕ್ ಟ್ರಾನ್ಸಾಕ್ಷನ್ ಮೂಲಕ ನಡೆದಿರೋ ಅವ್ಯವಹಾರವಾಗಿದೆ.. ಅಲ್ಲದೇ ಸಿಎಂ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು ..

ಇನ್ನು ರಾಮನಗರ ಜನರ ಆಶೀರ್ವಾದದಿಂದ ಕುಮಾರಸ್ವಾಮಿಯವರು 4 ಬಾರಿ
ಸಿಎಂ ಆಗಿದ್ದಾರೆ. ನನ್ನ ಮೇಲೆ ಸಹ ಅದೇ ಪ್ರೀತಿ ತೋರಿಸಿದ್ದೀರ, ಸೋಲು-ಗೆಲುವು ಚುನಾವಣೆ ಯಲ್ಲಿ ಸಾಮಾನ್ಯ, ನಾನು ಸೋಲಿಗೆ ತಲೆ
ಕೆಡಿಸಿಕೊಳ್ಳುವುದಿಲ್ಲ, ಆದ್ರೆ ಜಿಲ್ಲೆಯ ಜನ ಕುಮಾರಣ್ಣಗೆ ನೀಡಿರೋ ಪ್ರೀತಿ, ವಿಶ್ವಾಸ ನಾವು ಎಂದಿಗೂ ಮರೆಯಲ್ಲ. ಕುಮಾರಸ್ವಾಮಿ ಅವರು ಕೊಟ್ಟ 20 ತಿಂಗಳ ಅಧಿಕಾರ ಎಂದಿಗೂ ಮರೆಯಲಾಗಲ್ಲ‌. ಅಂದು ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಕೆಲಸ ಮಾಡೋಕೆ ಕಾರಣ ಬಿ.ಎಸ್ ಯಡಿಯೂರಪ್ಪ ನವರು ಇದನ್ನ ನಾವು ಮುಂದುವರೆಸುತ್ತೇವೆ ಎಂದು ರಾಮನಗರ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಅವರು, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರರವರು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ.ಬಿ ಸುರೇಶ್ ಬಾಬು ಅವರು, ಡಾ ಅಶ್ವಥ್ ನಾರಾಯಣ್ ಅವರು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ ಅವರು, ಶಾಸಕರಾದ ಅರವಿಂದ್ ಬೆಲ್ಲದ್ ಅವರು, ಭೋಜೇಗೌಡ ಅವರು ಸೇರಿದಂತೆ ಎರಡೂ ಪಕ್ಷಗಳ ಶಾಸಕರು, ಸಂಸದರು, ನಾಯಕರು, ಭಾಗಿಯಾಗಿದ್ದರು.

More articles

Latest article