Saturday, December 7, 2024

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ; ಜಾಮೀನು ಅರ್ಜಿ ನ.28ಕ್ಕೆ ಮುಂದೂಡಿಕೆ

Most read

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಚಿತ್ರನಟ ದರ್ಶನ್ ತೂಗುದೀಪ, ಅವರ ಸ್ನೇಹಿತೆ ಪವಿತ್ರಾಗೌಡ ಅವರ ರೆಗ್ಯುಲರ್ ಜಾಮೀನು ಅರ್ಜಿಯ ವಿಚಾರಣೆಯನ್ನು ನವಂಬರ್ 28ಕ್ಕೆ ಮುಂದೂಡಲಾಗಿದೆ. ಅರ್ಜಿ ವಿಚಾರಣೆ ಮುಂದೂಡಿಕೆ ಮಾಡಿದ ನ್ಯಾ. ವಿಶ್ವಜಿತ್ ಶೆಟ್ಟಿ. ಸುದೀರ್ಘ ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ವಿಚಾರಣೆಯನ್ನು ಮುಂದೂಡಿದರು.

ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ರೇಣುಕಾಸ್ವಾಮಿ ಪವಿತ್ರಾಗೌಡ ಅವರಿ ಕಳುಹಿಸಿದ್ದ ಸಂದೇಶಗಳನ್ನು ಕುರಿತು ಪ್ರಸ್ತಾಪಿಸಿದರು. ರೇಣುಕಾಸ್ವಾಮಿ ಫೆಬ್ರವರಿಯಿಂದ ಪವಿತ್ರಾಗೆ ಅಶ್ಲೀಲವಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ.. ಘನ ನ್ಯಾಯಾಲಯ ಆತ ಕಳುಹಿಸಿರುವ ಸಂದೇಶಗಳನ್ನು ಗಮನಿಸಬೇಕು. ಕೇವಲ ಪವಿತ್ರಾ ಅವರಿಗಷ್ಟೇ ಅಲ್ಲದೆ ಇತರ ಮಹಿಳೆಯರಿಗೂ ಕೆಟ್ಟದಾಗಿ ಸಂದೇಶಗಳನ್ನು ಕಳುಹಿಸಿದ್ದಾನೆ. ತಮ್ಮ ಗಮನಕ್ಕೆ ತಂದಿರುವುದು ಕೇವಲ ಸ್ಯಾಂಪಲ್ ಮಾತ್ರ ಎಂದರು.

ಶವ ಪರೀಕ್ಷೆ ವರದಿ ಒಂದು ತಿಂಗಳು ವಿಳಂಬವಾಗಿ ಬಂದಿದೆ. ದರ್ಶನ್ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ. ಆದರೆ ರೇಣುಕಾಸ್ವಾಮಿ ಅಪಹರಣ ಆಗಿದ್ದು ಚಿತ್ರದುರ್ಗದಲ್ಲಿ. ಅಂದು ದರ್ಶನ್ ಬೆಂಗಳೂರಿನಲ್ಲೇ ಇದ್ದರು. ಅಪಹರಣಕ್ಕೆ ಸಂಬಂಧಪಟ್ಟಂತೆ ದರ್ಶನ್ ಭಾಗಿ ಯಾಗಿರುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ರೇಣುಕಾಸ್ವಾಮಿ ಸ್ವಯಂಪ್ರೇರಿತವಾಗಿ ಬೆಂಗಲೂರಿಗೆ ಬಂದಿದ್ದಾನೆ. ಆವಿಷಯವನ್ನು ಆತನೇ ತನ್ನ ತಂದೆ, ತಾಯಿಗೆ ಫೋನ್ ಮಾಡಿ ಹೇಳಿದ್ದಾನೆ. ಸ್ನೇಹಿತರ ಜೊತೆ ಹೊರಗೆ ಬಂದಿದ್ದೇನೆ ಎಂದು ತಿಳಿಸಿದ್ದಾನೆ ಎಂದರು.

ಅಪಾರ್ಟ್ ಮೆಂಟ್ ಕಾವಲುಗಾರ ನೀಡಿದ ದೂರಿನ ಮೇಲೆ ಎಫ್ ಐಆರ್ ದಾಖಲಾಗಿದೆ. ಮೃತದೇಹದ ಮಹಜರು, ಮತ್ತು ಪೋಸ್ಟ್ ಮಾರ್ಟಂ ಅನ್ನು ವಿಳಂಬ ಮಾಡಲಾಗಿದೆ. 1.5-2.5 ಸೆಂ.ಮೀ.ಗಾಯ ಬಿಟ್ಟರೆ ಉಳಿದ ಗಾಯಗಳು ರಕ್ತದ ಗಾಯಗಳಲ್ಲ. ಶವ ಶೈತ್ಯಾಗಾರದಲ್ಲಿ ಇಟ್ಟಿದ್ದರಿಂದ ಸಾವಿನ ನಿಖರ ಸಮಯ ಸಿಕ್ಕಿಲ್ಲ. ಶವದ ಫೋಟೋ ಆಧಾರದಲ್ಲಿ ಸಾವಿನ ಸಮಯ ಅಂದಾಜಿಸಲಾಗಿದೆ ಎಂದೂ ನಾಗೇಶ್ ವಾದಿಸಿದರು.

ಅಪಹರಣವಾದಾಗ ಆತನ ಮೇಲೆ ಬಲ ಪ್ರಯೋಗ ಮಾಡಿಲ್ಲ. ಅಂದು ಯೂನಿಫಾರ್ಮ್ ಧರಿಸದೆ ಹೋಗಿದ್ದ. ಮಧ್ಯಾಹ್ನ ಊಟಕ್ಕೆ ಬರುವುದಿಲ್ಲವೆಂದು ಫೋನ್ ಮಾಡಿ ತಿಳಿಸಿದ್ದ. ಹೀಗಾಗಿ ಅಪಹರಣ ಎಂದು ಹೇಳಲು ಸಾಧ್ಯವಿಲ್ಲ. ಇದರಲ್ಲಿ ಒತ್ತಾಯವೂ ಇಲ್ಲ, ಮೋಸವೂ ಇಲ್ಲ ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ನ.28ಕ್ಕೆ ವಿಚಾರಣೆಯನ್ನು ಮುಂದೂಡಿದರು.

More articles

Latest article