ಕೋಲಾರ: ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಯಳಚೇಪಲ್ಲಿಯ ಗ್ರಾಮದಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಇದ್ದಕ್ಕಿದ್ದಂತೆ ನಾಪತ್ತೆಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಧನ್ಯಭಾಯಿ (13) ಹಾಗೂ ಚೈತ್ರಾಭಾಯಿ (13) ನಾಪತ್ತೆಯಾದ ಸಹೋದರಿಯರು.

ನಿನ್ನೆ ಬೆಳಗ್ಗೆ ಇವರು ಮನೆಯ ಮುಂದೆ ಆಟವಾಡುತ್ತಿದ್ದರು. ನಂತರ ಇಬ್ಬರೂ ಬಹಿರ್ದೆಸೆಗೆ ತೆರಳಿದ್ದಾರೆ. ಆಗ ಆತಂಕಗೊಂಡ ಪೋಷಕರು ಹುಡುಕಾಟ ನಡೆಸಿದ್ದಾರೆ. ಅಕ್ಕಪಕ್ಕದ ರಸ್ತೆಗಳಲ್ಲೂ ಹುಡುಕಾಡಿದ್ದಾರೆ. ಸಂಬಂಧಿಕರನ್ನು ವಿಚಾರಿಸಿದಾಗಲೂ ಯಾವುದೇ ಸುಳಿವು ಇಕ್ಕಿಲ್ಲ. ಆಗ ಸಂಜೆಯ ವೇಳೆಗೆ ಪೋಷಕರು ಮುಳಬಾಗಲು ಗ್ರಾಮಾಂತರ ಪೋಲೀಸು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಮಕ್ಕಳ ಹುಡುಕಾಟಕ್ಕೆ ಪ್ರಯತ್ನ ನಡೆಸಿದ್ದಾರೆ.
ಇವರಿಬ್ಬರೂ ಯಳಚೇಪಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದು, ಶಾಲಾ ಸಮವಸ್ರ್ತದಲ್ಲಿ ಆಟವಾಡುತ್ತಿದ್ದರು ಎನ್ನಲಾಗಿದೆ.