ಚಿತ್ರದುರ್ಗದಿಂದ ಪಟ್ಟಣಗೆರೆಗೆ ರೇಣುಕಾ ಸ್ವಾಮಿಯನ್ನು ಕರೆತಂದದ್ದು ಹೇಗೆ?: ಚಾಲಕ ರವಿ ಸ್ಟೋಟಕ ಮಾಹಿತಿ

Most read

ರೇಣುಕಾ ಸ್ವಾಮಿಯನ್ನು ಕೊಲೆ ಸಂಬಂಧ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 13 ಆರೋಪಿಗಳನ್ನು ಈಗಾಗಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದರ ನಡುವೆ ಜೂನ್ 13ರಂದು ಚಿತ್ರದುರ್ಗದಲ್ಲಿ ಮತ್ತೋರ್ವ ಆರೋಪಿ ಚಿತ್ರದುರ್ಗದಿಂದ ಪಟ್ಟಣಗೆರೆಗೆ ಕರೆ ತಂದ‌ ಕಾರ್ ಡ್ರೈವರ್ ರವಿ ಅಲಿಯಾಸ್ ರವಿಶಂಕರ್ ಪೊಲೀಸರ ಎದುರು ಶರಣಾನಾಗಿದ್ದಾನೆ. ಇದಕ್ಕೂ ಮೊದಲು ಸ್ಟೋಟಕ ಮಾಹಿತಿಯನ್ನು ನೀಡಿ ಪೊಲೀಸರಿಗೆ ಶರಣಾಗಿದ್ದಾನೆ.

ಚಿತ್ರದುರ್ಗದ ಕುರುಬರಹಟ್ಟಿ ಗ್ರಾಮದ ರವಿ ವೃತ್ತಿಯಲ್ಲಿ ಕಾರು ಚಾಲಕ. ಬಾಡಿಗೆಗೆ ಕಾರು ಚಾಲಕ. ಈತನ ಕಾರಿನಲ್ಲೇ ರೇಣುಕಾ ಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ಆರಂಭದಲ್ಲಿ 13 ಮಂದಿಯ ಹೆಸರು ಪ್ರಕರಣದಲ್ಲಿ ದಾಖಲಾಗಿತ್ತು. ಆನಂತರ ಮತ್ತೆ ನಾಲ್ಕು ಹೆಸರುಗಳು ಸೇರ್ಪಡೆಗೊಂಡು, ಅದರಲ್ಲಿ ರವಿ ಹೆಸರು ಕೂಡ ಇತ್ತು.

ಯಾವಾಗ ರವಿ ಹೆಸರು ಪ್ರಕರಣದಲ್ಲಿ ಕೇಳಿಬಂತೋ, ಚಿತ್ರದುರ್ಗದ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ನೀಡಿದ್ದಾನೆ. ನಂತರ ಚಿತ್ರದುರ್ಗದ ಡಿವೈಎಸ್ಪಿ ಕಚೇರಿಗೆ ಹೋಗಿ ಪೊಲೀಸ್ ಅಧಿಕಾರಿ ದಿನಕರ್ ಎದುರು ರವಿ ಶರಣಾಗತನಾಗಿದ್ದಾನೆ.

ದರ್ಶನ್ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬರುತ್ತಿದ್ದಂತೆಯೇ ಆತಂಕಗೊಂಡ ರವಿ, ಚಿತ್ರದುರ್ಗದ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳನ್ನು ಭೇಟಿಯಾಗಿ ನಡೆದ ಎಲ್ಲಾ ಮಾಹಿತಿ ನೀಡಿದ್ದಾನೆ.

ರವಿ ನೀಡಿದ ಮಾಹಿತಿಯನ್ನು ಮಾಧ್ಯಮಗಳಿಗೆ ಟ್ಯಾಕ್ಸಿ ಮಾಲೀಕರ ಸಂಘದ ಪದಾಧಿಕಾರಿಗಳು ಹಂಚಿಕೊಂಡಿದ್ದು, ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ರಾಘವೇಂದ್ರ ಸೇರಿದಂತೆ ಇನ್ನಿತರ ಆರೋಪಿಗಳು, ರವಿ ಕಾರನ್ನು ಬಾಡಿಗೆಗೆ ಬುಕ್ ಮಾಡಿದ್ದಾರೆ. ಚಿತ್ರದುರ್ಗದ ಕುಂಚಿಗನಾಳ್ ಸಮೀಪದ ಜಗಳೂರು ಮಹಾಲಿಂಗಪ್ಪ ಪೆಟ್ರೋಲ್ ಬಂಕ್ ಬಳಿ, ರೇಣುಕಾ ಸ್ವಾಮಿಯನ್ನು ಕಾರಿನಲ್ಲಿ ಕೂರಿಸಿಕೊಂಡ ರಾಘವೇಂದ್ರ ಜೊತೆಗೆ ಆಟೋ ಚಾಲಕ ಜಗ್ಗು, ಅನುಕಿರಣ್, ರಾಜು ಎಂಬುವವರು ಕೂಡ ಇದ್ದರು. ತುಮಕೂರು ಬಳಿ ಎಲ್ಲರೂ ಊಟ ಮಾಡಿದ್ದಾರೆ. ಆಗ ಸ್ವತಃ ರೇಣುಕಾ ಸ್ವಾಮಿಯ ಅದಕ್ಕೆ ದುಡ್ಡು ನೀಡಿದ್ದಾರೆ. ಅಲ್ಲಿಂದ ಸೀದಾ ಕೆಂಗೇರಿಗೆ ಬಂದವರೇ, ಪಟ್ಟಣಗೆರೆ ಶೆಡ್ ಲೊಕೇಷನ್ ಶೇರ್ ಮಾಡಿಸಿಕೊಂಡು, ಅಲ್ಲಿಗೆ ಹೋಗಿದ್ದಾರೆ. ರಾಘವೇಂದ್ರ ಹೇಳಿದಂತೆ ರವಿ ಕಾರನ್ನು ಪಟ್ಟಣಗೆರೆ ಶೆಡ್ಗೆ ತಿರುಗಿಸಿದ್ದಾರೆ ಎಂದು ಹೇಳಿದ್ದಾರೆ.

ಶೆಡ್ಗೆ ಹೋಗುತ್ತಿದ್ದಂತೆಯೇ, ಅಲ್ಲಿ ಹಲವು ಮಂದಿ ಇರುವುದು ರವಿ ಗಮನಕ್ಕೆ ಬಂದಿದೆ. ಕಾರಿನಿಂದ ರೇಣುಕಾ ಸ್ವಾಮಿಯನ್ನು ಇಳಿಸಿಕೊಂಡ ರಾಘವೇಂದ್ರ, ಶೆಡ್ನತ್ತ ಕರೆದುಕೊಂಡು ಹೋಗಿದ್ದಾನೆ. ರವಿಗೆ ಕಾರಿನಲ್ಲೇ ಇರುವಂತೆ ಹೇಳಿದ್ದಾನೆ. ಅಲ್ಲಿ ಏನು ನಡೆಯುತ್ತದೆ ಎಂಬುದು ಅರಿವಿಗೆ ಬಾರದೇ ಕಾರಿನಲ್ಲೇ ರವಿ ಮಲಗಿದ್ದಾನೆ.

ನಂತರ, ಅತ್ತ ಶೆಡ್ನಲ್ಲೇ ರೇಣುಕಾ ಸ್ವಾಮಿಯ ಕೊಲೆಯಾಗಿದೆ. ಕೆಲವರನ್ನು ಕೇಸ್ನಲ್ಲಿ ಸರೆಂಡರ್ ಆಗಲು ಪ್ಲ್ಯಾನ್ ಕೂಡ ಮಾಡಲಾಗಿದೆ. ಮಧ್ಯರಾತ್ರಿವರೆಗೂ ಶೆಡ್ನ ಹೊರಗೆ ರವಿ ಮತ್ತು ಇತರರು ಕಾಯುತ್ತಾ ಸಮಯ ಕಳೆದಿದ್ದಾರೆ. ಆ ನಂತರ ಬಂದು ರೇಣುಕಾಸ್ವಾಮಿ ಸಾವಿಗೀಡಾಗಿರುವ ವಿಷಯ ತಿಳಿಸಿ, ಪ್ರಕರಣದಲ್ಲಿಆರೋಪಿಗಳಾಗಿ ಶರಣಾಗಲು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಆಗ ಚಾಲಕ ರವಿ ಆತಂಕಕ್ಕೊಳಗಾಗಿ, “ಅಣ್ಣಾ ಇದೆಲ್ಲ ನಮಗೇಕಣ್ಣಾ? ಬಾಡಿಗೆ ಕೊಟ್ಟರೆ ಹೊರಟು ಹೋಗ್ತೀವಿ” ಎಂದು ದುಂಬಾಲು ಬಿದ್ದಿದ್ದಾನೆ. ಸ್ವಲ್ಪ ಹೊತ್ತಿನ ನಂತರ ಶೆಡ್ನಿಂದ ರಘು ಹೊರಗೆ ಬಂದು ಬಾಡಿಗೆ ಬಾಬ್ತು 4 ಸಾವಿರ ರೂ. ಹಣ ಕೊಟ್ಟು ಕಳುಹಿಸಿದ್ದಾರೆ. ಜಗ್ಗು, ಅನುಕಿರಣ್, ರಾಜು ಜೊತೆಗೆ ರವಿ ಜೂನ್ 9ರ ಬೆಳಗಿನ ಜಾವ 4 ಗಂಟೆಗೆ ಅಲ್ಲಿಂದ ಚಿತ್ರದುರ್ಗಕ್ಕೆ ಮರಳಿದ್ದಾನೆ ಎಂದು ರವಿ ನಮ್ಮ ಸಂಘಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

More articles

Latest article