ಕೈಯಲ್ಲೇ ಬಜೆಟ್‌ ಬರೆದು ಮಂಡಿಸಿದ ಛತ್ತೀಸಗಢ ಹಣಕಾಸು ಸಚಿವ

Most read

ರಾಯ್ಪುರ: ಕಂಪ್ಯೂಟರ್ಮುದ್ರಿತ ಪ್ರತಿ ಅಥವಾ ಟ್ಯಾಬ್ಬಳಕೆಯ ತಂತ್ರಜ್ಞಾನ ಯುಗದಲ್ಲಿ ಛತ್ತೀಸಗಢದ ಹಣಕಾಸು ಸಚಿವ .ಪಿ ಚೌಧರಿ ಅವರು 100 ಪುಟಗಳ ಬಜೆಟ್ಅನ್ನು ಕೈಯಲ್ಲೇ ಬರೆದು ಮಂಡಿಸಿ ದಾಖಲೆ ನಿರ್ಮಿಸಿದ್ದಾರೆಚೌಧರಿ ಅವರು ಸೋಮವಾರ ರಾಜ್ಯದ 2025–26ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ರೂ. 1.65 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ.

ಛತ್ತೀಸಗಢ ವಿಧಾನಸಭೆಯ ಇತಿಹಾಸದಲ್ಲಿ ಕಂಪ್ಯೂಟರ್ನಲ್ಲಿ ಟೈಪಿಸಿದ ಪ್ರತಿ ಬಳಸದೆ ಹಸ್ತ ಪ್ರತಿಯಲ್ಲಿ ಬಜೆಟ್ಮಂಡನೆಯಾಗಿರುವುದು ಇದೇ ಮೊದಲ ಬಾರಿಗೆ ಎಂದು ತಿಳಿದು ಬಂದಿದೆ. 

ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಚೌಧರಿ ಅವರು, ಛತ್ತೀಸಗಢಕ್ಕೆ ಐತಿಹಾಸಿಕ ಉಪಕ್ರಮ. ರಾಜ್ಯದ ಮೊದಲ ಕೈಬರಹದ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. 100 ಪುಟಗಳ ಬಜೆಟ್ ಸಂಪ್ರದಾಯವು ಸ್ವಂತಿಕೆಯ ಹೊಸ ಉದಾಹರಣೆಯಾಗಿದೆ ಎಂದು ಬರೆದುಕೊಂಡಿದ್ದಾರೆಐಎಎಸ್‌ ಅಧಿಕಾರಿಯಾಗಿದ್ದ ಒ.ಪಿ. ಚೌಧರಿ ಹಿಂದೆ ರಾಯ್ಪುರದ ಜಿಲ್ಲಾಧಿಕಾರಿಯಾಗಿದ್ದರು. ಮೊದಲ ಪ್ರಯತ್ನದಲ್ಲೇ ಯು ಪಿ ಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 22 ನೇ ವಯಸ್ಸಿನಲ್ಲಿ ಐಎಎಸ್ ಅಧಿಕಾರಿಯಾದ ಹೆಗ್ಗಳಿಕೆ ಇವರದ್ದು. ಛತ್ತೀಸಗಢದಲ್ಲಿ ಬಿಜೆಪಿ ಆಡಳಿತವಿದ್ದು, ವಿಷ್ಣು ದೇವ್ಸಾಯಿ ಮುಖ್ಯಮಂತ್ರಿಯಾಗಿದ್ದಾರೆ. ಚೌಧರಿ ಹಣಕಾಸು ಸಚಿವರಾಗಿದ್ದಾರೆ.

More articles

Latest article