ಉಕ್ಕು ಸಚಿವಾಲಯದ ಅಡಿಯಲ್ಲಿ ಬರುವ ಫೆರೋ ಸ್ಕ್ರ್ಯಾಪ್ ನಿಗಮ್ ಲಿಮಿಟೆಡ್ (FSNL) ಕಂಪನಿ MSTC ಲಿಮಿಟೆಡ್‌ನ 100 ಪ್ರತಿಶತ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಇದನ್ನು ಗುರುವಾರ, ಜಪಾನಿನ ಕಾರ್ಪೊರೇಶನ್ ಕೊನೊಯ್ಕೆ ಟ್ರಾನ್ಸ್‌ಪೋರ್ಟ್ ಕಂಪನಿ ಲಿಮಿಟೆಡ್‌ಗೆ ರೂ 320 ಕೋಟಿಗೆ ಮಾರಾಟ ಮಾಡಲು ಅನುಮೋದನೆ ನೀಡಿದೆ.
ಕಂಪನಿಗೆ ತಾಂತ್ರಿಕವಾಗಿ ಅರ್ಹವಾದ ಎರಡು ಹಣಕಾಸು ಬಿಡ್‌ಗಳನ್ನು ಸರ್ಕಾರ ಸ್ವೀಕರಿಸಿತ್ತು. ಸಾರಿಗೆ ಸಚಿವ ನಿತಿನ್ ಗಡ್ಕರಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಸಮಿತಿಯು ಎಫ್‌ಎಸ್‌ಎನ್‌ಎಲ್‌ನಲ್ಲಿ ಎಂಎಸ್‌ಟಿಸಿ ಲಿಮಿಟೆಡ್‌ನ 100 ಪ್ರತಿಶತ ಈಕ್ವಿಟಿ ಪಾಲನ್ನು ಕೊನೊಯ್ಕೆ ಟ್ರಾನ್ಸ್‌ಪೋರ್ಟ್ ಕಂಪನಿ ಲಿಮಿಟೆಡ್‌ಗೆ ಮಾರಾಟ ಮತ್ತು ನಿರ್ವಹಣಾ ನಿಯಂತ್ರಣದ ವರ್ಗಾವಣೆ ಮಾಡಲು ಅನುಮೋದನೆ ನೀಡಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಕಂಪನಿಯ ಖಾಸಗೀಕರಣಕ್ಕೆ ಸರ್ಕಾರವು 262 ಕೋಟಿ ರೂಪಾಯಿಗಳ ಮೀಸಲು ಬೆಲೆಯನ್ನು ನಿಗದಿಪಡಿಸಿತ್ತು. ಜಪಾನ್ ಕಂಪನಿ ಇದಕ್ಕಿಂತ ಹೆಚ್ಚಿನ 320 ಕೋಟಿ ರೂ. ಬಿಡ್ ಮಾಡಿತ್ತು. ಎರಡನೇ ಬಿಡ್ ಇಂಡಿಕ್ ಜಿಯೋ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್‌ನಿಂದ (ಚಂದನ್ ಸ್ಟೀಲ್ ಲಿಮಿಟೆಡ್‌ನ ಅಂಗಸಂಸ್ಥೆ) ಎಂದು ಸಚಿವಾಲಯ ತಿಳಿಸಿದೆ.