ಜನಗಣತಿ ಜತೆಯಲ್ಲಿ ಜಾತಿ ಗಣತಿ: ಕೇಂದ್ರ ಸರ್ಕಾರ ಘೋಷಣೆ

Most read

ನವದೆಹಲಿ: ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಬುಧವಾರ ಘೋಷಿಸಿದೆ. ಜಾತಿ ಸಮೀಕ್ಷೆಯನ್ನು ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ಬಳಸಿಕೊಳ್ಳುತ್ತಿವೆ ಎಂದು ಪ್ರತಿಪಾದಿಸುತ್ತಿದ್ದ ಕೇಂದ್ರ ಸರ್ಕಾರ, ಇದೀಗ ಜಾತಿ ಗಣತಿಯನ್ನು ಜನಗಣತಿಯ ಭಾಗವಾಗಿಸಿ ಸಮೀಕ್ಷೆ ನಡೆಸುವುದಾಗಿ ತಿಳಿಸಿದೆ.

ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಕೆಲವು ರಾಜ್ಯಗಳು ಜಾತಿ ಗಣತಿಯನ್ನು ನಡೆಸಿವೆ. ಇನ್ನೂ ಕೆಲ ರಾಜ್ಯಗಳು ಜಾತಿ ಸಮೀಕ್ಷೆ ನಡೆಸಿವೆ. ಮತ್ತೆ ಕೆಲವು ರಾಜ್ಯಗಳಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಅಪಾರದರ್ಶಕವಾಗಿ ಸಮೀಕ್ಷೆ ಕೈಗೊಳ್ಳಲಾಗಿದೆ. ಇವೆಲ್ಲವೂ ಸಮಾಜದಲ್ಲಿ ಅನುಮಾನ ಮೂಡಿಸುತ್ತವೆ. ಆದರೆ ರಾಜಕೀಯದ ಉದ್ದೇಶದಿಂದ ಸಾಮಾಜಿಕ ಪರಿಸ್ಥಿತಿ ಹಾಳಾಗಬಾರದು. ಇದನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಜನ ಗಣತಿಯಲ್ಲಿ ಜಾತಿ ಗಣತಿಯ ಮಾಹಿತಿಯನ್ನೂ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.

More articles

Latest article