ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ; ಬೆಂಗಳೂರಿಗೆ ಮೂರನೇ ಸ್ಥಾನ

Most read

ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದ್ದು, ಶೇ 93.60ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಉತ್ತೀರ್ಣ ಮಟ್ಟ ಶೇ. 0.06ರಷ್ಟು ಏರಿಕೆಯಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 95ರಷ್ಷು ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ತಿರುವನಂತಪುರ ಶೇ 99.79 ರಷ್ಟು ಫಲಿತಾಂಶ ಪಡೆದು ಮೊದಲ ಸ್ಥಾನ ಗಳಿಸಿದ್ದರೆ, ವಿಜಯವಾಡ ಶೇ 99.79 ಫಲಿತಾಂಶ ಪಡೆದು ಎರಡನೇ ಸ್ಥಾನದಲ್ಲಿದೆ. ಶೇ 98.90 ರಷ್ಟು ಫಲಿತಾಂಶ ಪಡೆದು ಬೆಂಗಳೂರು ಮೂರನೇ ಸ್ಥಾನ ಗಳಿಸಿದೆ. ಉಳಿದಂತೆ ಚೆನ್ನೈ, ಪುಣೆ, ಅಜ್ಮೀರ್ ನಂತರದ ಸ್ಥಾನದಲ್ಲಿವೆ. ದೆಹಲಿ 7 ನೇ ಸ್ಥಾನದಲ್ಲಿದೆ. ಗುವಾಹಟಿ ಕೊನೆಯ ಸ್ಥಾನದಲ್ಲಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ?

• ಮೊದಲನೆಯದಾಗಿ ನೀವು CBSE ಯ ಅಧಿಕೃತ ವೆಬ್‌ಸೈಟ್ cbse.gov.in ಗೆ ಭೇಟಿ ನೀಡಬೇಕು.
• ನಂತರ ಫಲಿತಾಂಶ ವಿಭಾಗಕ್ಕೆ ಹೋಗಿ ಮತ್ತು CBSE 10ನೇ ತರಗತಿಯ ಫಲಿತಾಂಶ 2025 ಅನ್ನು ಪರಿಶೀಲಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
• ಅದರ ನಂತರ ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
• ಈಗ ನಿಮ್ಮ CBSE 10ನೇ ತರಗತಿಯ ಫಲಿತಾಂಶ/ಅಂಕಪಟ್ಟಿಯನ್ನು ಸ್ಕ್ರೀನ್ ಮೇಲೆ ನೋಡಿ.
• ಭವಿಷ್ಯದ ಬಳಕೆಗಾಗಿ ಅದರ ಪ್ರಿಂಟ್ ಕಾಪಿಯನ್ನು ತೆಗೆದಿಟ್ಟುಕೊಳ್ಳಿ.
ಇದಲ್ಲದೆ DigiLocker ಮತ್ತು UMANG ಅಪ್ಲಿಕೇಶನ್‌ಗಳ ಮೂಲಕ ಫಲಿತಾಂಶ ಪರಿಶೀಲಿಸಬಹುದು.

More articles

Latest article