Saturday, July 27, 2024

ಸಿಬಿಐ, ಐಟಿ, ಇಡಿ ಬಿಜೆಪಿಯ ಅಂಗಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ : ಸಿದ್ದರಾಮಯ್ಯ ಆರೋಪ

Most read

2014ರಿಂದ ಇಲ್ಲಿಯವರೆಗೂ ಒಟ್ಟು ಇ.ಡಿ.(ಜಾರಿ ನಿರ್ದೇಶನಾಲಯ) ಪ್ರಕರಣಗಳಲ್ಲಿ ಶೇ.95 ವಿಪಕ್ಷಗಳ ನಾಯಕರ ಮೇಲಿನವು ಎಂದು ಕೇಂದ್ರ ಸರ್ಕಾರದ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಸಿಬಿಐ, ಐಟಿ, ಇಡಿ ಗಳು ಈಗ ಸ್ವಾಯತ್ತ ಸಂಸ್ಥೆಗಳಾಗಿ ಉಳಿದಿಲ್ಲ, ಇವೆಲ್ಲವು ಬಿಜೆಪಿ ಪಕ್ಷದ ಅಂಗಸಂಸ್ಥೆಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂಬುದಕ್ಕೆ ಕಳೆದ ಹತ್ತು ವರ್ಷಗಳಲ್ಲಿ ವಿಪಕ್ಷ ನಾಯಕರ ಮೇಲೆ ನಡೆದ ಇಡಿ ( ಜಾರಿ ನಿರ್ದೇಶನಾಲಯ ) ದಾಳಿ ಸಾಕ್ಷಿ ಎಂದು ಆರೋಪಿಸಿದ್ದಾರೆ.

ʼಬಿಜೆಪಿ ಸರ್ಕಾರ ಸ್ವಾರ್ಥ ರಾಜಕೀಯದ ಮೇರೆ ಮೀರಿದೆ. ವಿಪಕ್ಷಗಳು ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಣಬೇಕಿರುವುದು ಮಾತ್ರವಲ್ಲ ಐಟಿ, ಸಿಬಿಐ, ಇಡಿ ಸಂಸ್ಥೆಗಳ ವಿರುದ್ಧವೂ ಹೋರಾಡಬೇಕಾದ ಅನಿವಾರ್ಯತೆ ಬಂದಿದೆ ಎಂದರು.

ʼಬಿಜೆಪಿ ಆಡಳಿತದಲ್ಲಿ ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅವಸಾನದ ಹಾದಿಗೆ ಸರಿಯುತ್ತಿದೆʼ ಎಂದು ಬೇಸರ ವ್ಯಕ್ತಪಡಿಸಿದರು..

More articles

Latest article