ಬೆಂಗಳೂರು: ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಎಲ್ಲಾ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಸಮೀಕ್ಷೆ ಕಾರ್ಯದಲ್ಲಿ ಮೊದಲನೇ ಅಂಗವಾಗಿ ಮನೆ ಪಟ್ಟಿ ಅಂದ್ರೆ ಹೌಸ್ ಲಿಸ್ಟಿಂಗ್ ಎಕ್ಸರ್ಸೈಜ್ ಮಾಡಲಾಗುತ್ತಿದ್ದು ಇದರ ಭಾಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ಆಯೋಗದ ಸಿಬ್ಬಂದಿ ಸ್ಟಿಕ್ಕರ್ ಅಂಟಿಸಿದರು.
ಹೇಗೆ ಕಾರ್ಯನಿರ್ವಹಣೆ?
ರೆಸಿಡೆನ್ಷಿಯಲ್ ಆರ್ ಆರ್ ನಂಬರ್ ಆಧಾರದ ಮೇಲೆ ಆಯೋಗದ ಸಿಬ್ಬಂದಿ ಪ್ರತಿಯೊಂದು ಮನೆಗೆ ಹೋಗಿ ಅಲ್ಲಿ ಒಂದು ಹೌಸ್ ಹೋಲ್ಡ್ ಐಡಿ ಜನರೇಟ್ ಮಾಡುತ್ತಾರೆ. ಬಳಿಕ ಜನರೇಟ್ ಮಾಡಿದ ಮನೆ ಐಡಿ ಆಧಾರದ ಮೇಲೆ ಆಯೋಗದವರು ಎನ್ಯೂಮರೇಷನ್ ಬ್ಲಾಕ್ಸ್ ತಯಾರಿ ಮಾಡಿಕೊಳ್ಳುತ್ತಾರೆ. ಪ್ರತಿ ಎನ್ಯುಮರೇಷನ್ ಬ್ಲಾಕಿಗೆ ಒಬ್ಬರು ಶಿಕ್ಷಕರು ಬಂದು 22ನೇ ತಾರೀಖಿನಿಂದ ಸಮೀಕ್ಷೆ ಕಾರ್ಯವನ್ನು ಮಾಡುತ್ತಾರೆ.