ಜಾತಿಗಣತಿ ವರದಿ | ಬಿಜೆಪಿಯಲ್ಲಿರುವ ದಲಿತ ಶೋಷಿತ ಸಮುದಾಯದ ನಾಯಕರು ತಮ್ಮ ನಿರ್ಧಾರ ಪ್ರಕಟಿಸಬೇಕು

Most read

ಕಾಂತರಾಜ ಆಯೋಗ ಸಮೀಕ್ಷೆ ನಡೆಸಿರುವ ಜಾತಿಗಣತಿ ವರದಿಯನ್ನು ಸ್ವೀಕರಿಸಲು ಮುಂದಾದ ಸಿದ್ದರಾಮಯ್ಯನವರನ್ನು ಮತ್ತು ಜಾತಿಗಣತಿ ವರದಿಯ ವಿರುದ್ಧವೇ ಪಟ್ಟಭದ್ರ ಹಿತಾಸಕ್ತಿಗಳು ಟೀಕಿಸುತ್ತಿವೆ ಮತ್ತು ವಿರೋಧಿಸುತ್ತಿವೆ..

ಕಾಂಗ್ರೆಸ್ ನಲ್ಲಿರುವ ದಲಿತ ಶೋಷಿತ ಸಮುದಾಯಗಳು 100% ಜಾತಿಗಣತಿ ವರದಿ ಬಿಡುಗಡೆ ಆಗಲೇಬೇಕು ಸಿದ್ದರಾಮಯ್ಯ ನವರ ಜೊತೆ ನಾವಿದ್ದೇವೆ ಎನ್ನುವ ಬದ್ಧತೆ ತೋರಿಸುತ್ತಿವೆ. ಇದು ಒಳ್ಳೆಯ ಬೆಳವಣಿಗೆ..

ಇನ್ನೊಂದುಕಡೆ ಕೇಂದ್ರ ಬಿಜೆಪಿ ಮತ್ತು ರಾಜ್ಯ ಬಿಜೆಪಿ ಎರಡೂ ಕೂಡ ನೇರವಾಗಿ ಜಾತಿಗಣತಿ ವರದಿಯ ವಿರುದ್ಧವಾಗಿವೆ.. ಈಗಾಗಲೇ ಅಮಿತ್ ಶಾ, ಮೋದಿ ಕೂಡ ಜಾತಿಗಣತಿಯನ್ನು ನೇರ ಮತ್ತು ಪರೋಕ್ಷವಾಗಿ ವಿರೋಧಿಸುವ ಹೇಳಿಕೆಯನ್ನು ಕೊಟ್ಟು ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಕೂಡ ಕಾಂತರಾಜ ಆಯೋಗದ ವರದಿ ಬಿಡುಗಡೆ ಆದರೆ ಹಿಂದೂ ಧರ್ಮ ಒಡೆದಂತಾಗುತ್ತದೆ ಎನ್ನುವ ಬಾಲಿಶ ಹೇಳಿಕೆಗಳನ್ನು ಕೊಡುವುದರ ಮೂಲಕ ತಮ್ಮ ತಮ್ಮ ಜಾತಿಯ ಹಿತ ಕಾಪಾಡುವ ನಿಟ್ಟಿನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದು ವಿಷಯವೇನೆಂದರೆ; ಸ್ವತಃ ಕಾಂಗ್ರೆಸ್ ನಲ್ಲಿಯೇ ಇರುವ ಅನೇಕ ಲಿಂಗಾಯತ ,ಒಕ್ಕಲಿಗ ರಾಜಕಾರಣಿಗಳು ಈ ಜಾತಿಗಣತಿ ವರದಿಯನ್ನು ಕೆಲವರು ನೇರ, ಹಲವರು ಪರೋಕ್ಷವಾಗಿ ವಿರೋಧಿಸುವುದರ ಮೂಲಕ ಪಕ್ಷಾತೀತವಾಗಿ ತಮ್ಮ ತಮ್ಮ ಸುದಾಯಗಳ ಹಿತಾಸಕ್ತಿ ಕಾಪಾಡಲು ಮುಂದಾಗಿದ್ದಾರೆ.

ವರದಿ ಸಲ್ಲಿಕೆ

ಈಗ..
ಬಿಜೆಪಿ ಯಲ್ಲಿರುವ ದಲಿತ, ಶೋಷಿತ ಸಮುದಾಯಗಳ ನಾಯಕರುಗಳು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಬೇಕಿದೆ… ಸಾಮಾಜಿಕ ನ್ಯಾಯವನ್ನು ಒಪ್ಪುವವರಾಗಿದ್ದರೆ, ಅಥವಾ ಜಾತಿಗಣತಿ ವರದಿ ಬಿಡುಗಡೆ ಆದರೆ ಜನಸಂಖ್ಯೆಗೆ ಅನುಗುಣವಾಗಿ ಆಯಾ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಬಯಸುವವರಾಗಿದ್ದರೆ, ಬಿಜೆಪಿ ಯಲ್ಲಿರುವ ದಲಿತ ಶೋಷಿತ ಸಮುದಾಯಗಳ ಲೀಡರ್ ಗಳು, ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಬಿಜೆಪಿಯ ನೆರಳಿನಲ್ಲಿದ್ದುಕೊಂಡೇ ನಾಟಕವಾಡುತ್ತಿರುವ ಅನೇಕರು ಪಕ್ಷಾತೀತವಾಗಿ ತಮ್ಮ ಸಮುದಾಯದ ಹಿತಾಸಕ್ತಿ ಕಾಪಾಡುವ ನೈತಿಕತೆ ತೋರಿಸುವರೇ? ಅವರಲ್ಲಿ ನಿಜಕ್ಕೂ ಸಮುದಾಯದ ರಕ್ತ ಹರಿಯುತ್ತಿದ್ದರೆ, ಅವರು ನಿಜವಾಗಿಯೂ ಈ ದೇಶದ ಸಂವಿಧಾನವನ್ನು ಒಪ್ಪುವವರಾಗಿದ್ದರೆ, ಬಾಬಾ ಸಾಹೇಬರು ಹೇಳಿದ ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕೆಂದು ಇಚ್ಛಿಸುವವರಾಗಿದ್ದರೆ ಈ ಸಮಯದಲ್ಲಿ ಪಕ್ಷಾತೀತವಾಗಿ ಜಾತಿಗಣತಿ ವರದಿಯ ಪರವಾಗಿ ಧ್ವನಿ ಎತ್ತುತ್ತಾರೆ ಮತ್ತು ಮೋದಿ, ಅಮಿತ್ ಶಾ, ವಿಜಯೇಂದ್ರ, ಪ್ರತಾಪ್ ಸಿಂಹನ ತರಹ ತಮ್ಮ ಸಮುದಾಯಗಳ ಹಿತಾಸಕ್ತಿಗಾಗಿ ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆ..

ರುದ್ರು ಪುನೀತ್
ಯುವ ಬರಹಗಾರರು

ಇದನ್ನೂ ಓದಿಜಾತಿವಾದಿಗಳ ಹೆಗಲೇರಿದ ಜಾತಿಗಣತಿ ಭೂತ

More articles

Latest article