ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣ; ತನಿಖೆಗೆ ಎಸ್.ಐ.ಟಿ ರಚನೆ

ಬೆಂಗಳೂರು : ಖ್ಯಾತ ಉದ್ಯಮಿ, ಕಾನ್ಫಿಡೆಂಡ್ ಗ್ರೂಪ್ ನ ಸಂಸ್ಥಾಪಕ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿದೆ.

ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ವಂಶಿ ಕೃಷ್ಣ, ಹಾಗೂ ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ನೇತೃತ್ವದಲ್ಲಿ ಎಸ್.ಐ.ಟಿ ತಂಡ ರಚಿಸಲಾಗಿದ್ದು, ತಂಡದಲ್ಲಿ ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್, ಹಲಸೂರು ಉಪವಿಭಾಗದ ಎಸಿಪಿ ಸುಧೀರ್, ಮುಂತಾದ ಅಧಿಕಾರಿಗಳಿದ್ದಾರೆ.

ಈ ನಡುವೆ ತನಿಖೆಯ ಭಾಗವಾಗಿ, ಸಿ.ಜೆ ರಾಯ್ ಪತ್ನಿ, ಮಗ, ಮತ್ತು ಮಗಳು ಸೇರಿದಂತೆ ಅವರ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವ ಪೋಲೀಸರು ಸಿ.ಜೆ ರಾಯ್ ಅವರ ದಿನಚರಿ ಪುಸ್ತಕವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ; ರಾಯ್ ಸಹೋದರ ಆರೋಪ

ಆದಾಯ ತೆರಿಗೆ ಇಲಾಖೆಯ ಆಯುಕ್ತರು ನನ್ನ ಸಹೋದರ ಸಿಜೆ ರಾಯ್ ಅವರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ, ಸಿ.ಜೆ.ರಾಯ್ ಅವರಿಗೆ ಯಾವುದೇ ಸಾಲಗಳಾಗಲಿ, ಆರ್ಥಿಕ ಸಮಸ್ಯೆಗಳಾಗಲಿ ಇರಲಿಲ್ಲ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದವು, ಎಂದು ರಾಯ್ ಅವರ ಸಹೋದರ ಸಿ.ಜೆ ಬಾಬು ಗಂಭೀರ ಆರೋಪ ಮಾಡಿದ್ದಾರೆ . ಈ ಆರೋಪವನ್ನು ತಳ್ಳಿಹಾಕಿರುವ ಆದಾಯ ತೆರಿಗೆ ಇಲಾಖೆ, ನಾವು ರಾಯ್ ಅವರಿಗೆ ಯಾವುದೇ ಒತ್ತಡ ನೀಡಿಲ್ಲ ಈ ಕುರಿತು ಎಸ್.ಐ.ಟಿ ತನಿಖೆಗೆ ಸಹಕರಿಸುವುದಾಗಿ ತಿಳಿಸಿದೆ.

ನಾಳೆ ಸಿ.ಜೆ ರಾಯ್ ಅಂತ್ಯಕ್ರಿಯೆ;

ಶಿವಾಜಿ ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ರಾಯ್ ಅವರ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ಪೂರ್ಣಗೊಂಡ ನಂತರ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ ನಾಳೆ ಸೇಂಟ್ ಜೋಸೆಫ್ ಚರ್ಚ್ ನಲ್ಲಿ ಪ್ರಾರ್ಥನೆಯ ನಂತರ ಕುಟುಂಬಸ್ಥರ ಇಚ್ಚೆಯಂತೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರಾಯ್ ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ- ಸುಪ್ರೀಂ ಕಳವಳ; ಮನೆಗೆಲಸದವರಿಗಿಲ್ಲ ಕನಿಷ್ಠ ಸಂಬಳ

More articles

Latest article

Most read