ಬೆಂಗಳೂರು : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರವನ್ನು ಶೇ.15 ರಷ್ಟು ಪರಿಷ್ಕರಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಬಸ್ ಪ್ರಯಾಣ ದರ ಏರಿಕೆಗೆ ಅನುಮೋದನೆ ನೀಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರಯಾಣದರ ಪರಿಷ್ಕರಣೆ ಗೊಳಿಸಿದಾಗ ಅಂದರೆ 10.01.2015 ರಲ್ಲಿ ಅಂದಿನ ದಿನಗಳಲ್ಲಿ ಕ್ರಮವಾಗಿ ಪ್ರತಿ ಲೀಟರ್ ಡಿಸೇಲ್‌ಗೆ ರೂ.60.98 ಮತ್ತು ರೂ.46.24 ಇತ್ತು. ರಾಜ್ಯದ 4 ಸಾರಿಗೆ ನಿಗಮಗಳಿಗೆ ಡಿಸೇಲ್ ಒಟ್ಟು ವೆಚ್ಚವು ರೂ.9.16 ಕೋಟಿ ಇತ್ತು. ಪ್ರಸ್ತುತ ಈಗ ರೂ.13.21 ಕೋಟಿಗೆ ಹೆಚ್ಚಳವಾಗಿದೆ. ಈ 4 ಸಾರಿಗೆ ಸಂಸ್ಥೆಗಳಿಂದ ಪ್ರತಿದಿನ ಸಿಬ್ಬಂದಿ ವೆಚ್ಚವು ರೂ.12.85 ಕೋಟಿಯಿದ್ದದ್ದು, ಪ್ರಸ್ತುತ. ರೂ.18.36 ಕೋಟಿಯಾಗಿದೆ. ಪ್ರತಿದಿನ ರೂ.9.56 ಕೋಟಿ ಹೆಚ್ಚುವರಿ ಹೊರೆಯುಂಟಾಗುತ್ತದೆ ಎಂದು ಸಾರಿಗೆ ಸಚಿವರು ಇತ್ತೀಚೆಗೆ ಹೇಳಿದ್ದರು.