ಬೆಂಗಳೂರಿಗೆ ಸಾಗಾಣೆ ಮಾಡಲಾಗಿದ್ದ 1 ಕೋಟಿ ರೂ. ಮೌಲ್ಯದ ತಂಬಾಕು ಪದಾರ್ಥ ಜಪ್ತಿ

Most read

ಬೆಂಗಳೂರು: ಸೂಕ್ತ ದಾಖಲೆಗಳಿಲ್ಲದೆ ಬೆಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡಿದ್ದ ಸುಮಾರು 1 ಕೋಟಿ ರೂ. ಮೌಲ್ಯದ ತಂಬಾಕು ಪದಾರ್ಥಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ 850 ಬಾಕ್ಸ್ ಗಳಲ್ಲಿ ಸಾಗಾಣಿಕೆ ಮಾಡಲಾಗಿದೆ.

ಕಮಲ್ ಪಸಂದ್‌ ಪಾನ್‌‌ ಮಸಾಲ, ಹನ್ಸ್ ಚಾಪ್‌, ಚೈನಿ ಫಿಲ್ಟರ್‌ ತಂಬಾಕು ಹಾಗೂ ಶಿಖರ್‌ ಪಾನ್‌ ಮಸಾಲ ಮೊದಲಾದ ಪ್ರಸಿದ್ಧ ಬ್ರ್ಯಾಂಡ್‌ ಗಳ ಸರಕನ್ನು ರೈಲಿನ ಮೂಲಕ ಸಾಗಾಣಿಕೆ ಮಾಡಲಾಗಿದೆ.

ಖಚಿತ ಮಾಹಿತಿ ಆಧರಿಸಿ ರೈಲ್ವೇ ಫ್ಲಾಟ್‌ಫಾರಂನಲ್ಲಿ ಹಾಗೂ ವಾಹನಗಳಲ್ಲಿ ಸೂಕ್ತ ದಾಖಲೆಗಳಿಲ್ಲದೇ ದಾಸ್ತಾನು ಮಾಡಲಾಗಿದ್ದ ಈ ಉತ್ಪನ್ನಗಳ ಮಾಹಿತಿ ಆಧರಿಸಿ ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಿಭಾಗದ ಜಾರಿ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪರಿಶೀಲನೆ ನಡೆಸಿದಾಗ ಈ ಸರಕುಗಳಿಗೆ ಸೂಕ್ತ ದಾಖಲೆಗಳು ಹಾಗೂ ವಾರಸುದಾರರಿಲ್ಲದಿರುವುದು ಪತ್ತೆಯಾಗಿದೆ.

ತಂಬಾಕು ಉತ್ಪನ್ನಗಳಿಗೆ ಶೇ. 28 ರಷ್ಟು ಜಿಎಸ್‌‍ ಟಿ ಹಾಗೂ ಸೆಸ್‌‍ ಸೇರಿ ಒಟ್ಟು ಶೇ. 56ರ ರಷ್ಟು ತೆರಿಗೆ ವಿಧಿಸಲಾಗುತ್ತದೆ. ಸುಮಾರು ಒಂದು ಕೋಟಿ ರೂ. ಮೌಲ್ಯದ ಈ ಸರಕಿನಲ್ಲಿ ಸರ್ಕಾರಕ್ಕೆ ಅಪಾರ ಪ್ರಮಾಣದ ರಾಜಸ್ವ ನಷ್ಟವಾಗಿರುವುದು ಬೆಳಕಿಗೆ ಬಂದಿದೆ.

More articles

Latest article