ಕೆಂಗೇರಿ ಕೆರೆಗೆ ಬಿದ್ದ ಅಣ್ಣ ತಂಗಿ: ಅಣ್ಣನ ಶವ ಪತ್ತೆ, ತಂಗಿ ಮೃತದೇಹಕ್ಕಾಗಿ ಹುಡುಕಾಟ!

ಕೆಂಗೇರಿ ಕೆರೆಯಲ್ಲಿ ಅಣ್ಣ ತಂಗಿ ಬಿದ್ದು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಕಾರ್ಯಾಚರಣೆ ಬಳಿಕ ಅಣ್ಣ ಶ್ರೀನಿವಾಸನ ಮೃತ ದೇಹ ಪತ್ತೆಯಾಗಿದೆ.

ಸೋಮವಾರ ಅಣ್ಣ ಶ್ರೀನಿವಾಸ್ (13) ತಂಗಿ ಲಕ್ಷ್ಮೀ (11) ನಾಪತ್ತೆಯಾಗಿದ್ದರು. ಕೆಂಗೇರಿ ಕೆರೆಯಲ್ಲಿ ಮಕ್ಕಳು ಬಿದ್ದಿರುವ ಶಂಕೆ ಹಿನ್ನೆಲೆ ಇಂದು ಬೆಳಗ್ಗೆ ಅಗ್ನಿಶಾಮಕದಳ ಸಿಬ್ಬಂದಿ ಕಾರ್ಯಾಚರಣೆ ಆರಂಭ ಮಾಡಿದ್ದರು. ಸುಮಾರು 3 ಗಂಟೆಗಳಿಂದ ಸತತ ಕಾರ್ಯಾಚರಣೆ ನಡೆಸಿ, ಅಣ್ಣನ ಮೃತ ದೇಹ ಪತ್ತೆ ಹಚ್ಚಿದ್ದಾರೆ. ಆದರೆ ತಂಗಿಯ ಮೃತದೇಹಕ್ಕಾಗಿ ಕಾರ್ಯಚರಣೆ ಮುಂದುವರೆದಿದೆ.

ಕೆಂಗೇರಿ ಕೆರೆ ಪಕ್ಕದ ಬಡಾವಣೆಯಲ್ಲಿ ವಾಸವಾಗಿರುವ ನಾಗಮ್ಮ ಎಂಬುವರ ಮಕ್ಕಳಾದ ಶ್ರೀನಿವಾಸ್ ಮತ್ತು ಲಕ್ಷ್ಮೀ ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೆಂಗೇರಿ ಕೆರೆಗೆ ನೀರು ತರಲು ಹೋಗಿದ್ದಾಗ ಈ ಘಟನೆ ನಡೆದಿದೆ.

More articles

Latest article

Most read