ವಿದೇಶಕ್ಕೆ ಓಡಿಹೋಗಿರುವ ಪ್ರಜ್ವಲ್ ಭಾರತಕ್ಕೆ ಕರೆತನ್ನಿ: ಪ್ರಧಾನಿಗೆ ಸಿಎಂ ಪತ್ರ

Most read

ಬೆಂಗಳೂರು: ಕರ್ನಾಟಕದಲ್ಲಿ ಹಿಂದೆಂದೂ ಕಂಡು ಕೇಳರಿಯದ ಕಾಮಕಾಂಡದಲ್ಲಿ ಪಾಲ್ಗೊಂಡಿರುವ ಹಾಸನ NDA ಅಭ್ಯರ್ಥಿ, ಹಾಲಿ ಸಂಸದ ಪ್ರಜ್ವಲ್ ರೇವಣ್ಣನನ್ನು ಭಾರತಕ್ಕೆ ಕರೆತರಲು ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ಮಾಡಿರುವ ಕೃತ್ಯಗಳು ಭಯಾನಕ ಮತ್ತು ನಾಚಿಕೆಗೇಡಿತನದ್ದಾಗಿದ್ದು, ಇಡೀ ದೇಶದ ಆತ್ಮಸಾಕ್ಷಿಯನ್ನೇ ಕಲಕಿದೆ.

ರಾಜ್ಯ ಸರ್ಕಾರ ಈಗಾಗಲೇ ಸಿಐಡಿ ಅಡಿಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಿದೆ. SIT ತಂಡ ತನಿಖೆಯನ್ನೂ ಆರಂಭಿಸಿದೆ. ತನ್ನ ಮೇಲೆ ಪ್ರಕರಣ ದಾಖಲಾಗಬಹುದೆಂಬ ಅನುಮಾನದಲ್ಲಿ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದಾನೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಪ್ರಕರಣದ ಗಂಭೀರತೆಯ ಹಿನ್ನೆಲೆಯಲ್ಲಿ ಆತನನ್ನು ಕರೆತಂದು ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕಾಗಿರುತ್ತದೆ. ಆತ ಸಂಸತ್ ಸದಸ್ಯನಾಗಿರುವ ಹಿನ್ನೆಲೆಯಲ್ಲಿ ರಾಜತಾಂತ್ರಿಕ ವೀಸಾ ಮೂಲಕ ವಿದೇಶಕ್ಕೆ ಹೋಗಿದ್ದಾನೆ. ಹೀಗಾಗಿ ಕೂಡಲೇ ಅವನ ರಾಜತಾಂತ್ರಿಕ ವೀಸಾ ರದ್ದುಪಡಿಸಬೇಕೆಂದು ಸಿದ್ಧರಾಮಯ್ಯ ಕೋರಿದ್ದಾರೆ.

ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯಗಳನ್ನು ಈ ವಿಷಯದಲ್ಲಿ ಗಮನಸೆಳೆದು ಕೂಡಲೇ ಆತನನ್ನು ಭಾರತಕ್ಕೆ ಕರೆತರಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಅವರನ್ನು ಸಿದ್ಧರಾಮಯ್ಯ ಕೋರಿದ್ದಾರೆ.

More articles

Latest article