ಲಂಚ ಆರೋಪ; ಇಓ ಸರ್ವೇಶ್ ಅಮಾನತ್ತಿಗೆ ಪ್ರತಿಭಟನಾಕಾರರ ಆಗ್ರಹ

Most read

ಮುಳಬಾಗಿಲು: ಅಂಬ್ಲಿಕಲ್ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿಯೋಜನೆ ಮಾಡಿರುವ ಕಾಯಕ ಮಿತ್ರ ಹುದ್ದೆಯ ಆಯ್ಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸರ್ವೇಶ್ ರವರು ಲಂಚ ಪಡೆದು ಅಧಿಕಾರ ದುರುಪಯೋಗ ಪಡಿಸಿದ್ದಾರೆ ಎಂದು ವಕೀಲರಾದ ವಾಸುದೇವರೆಡ್ಡಿ.ಕೆ ಆಪಾದಿಸಿದ್ದಾರೆ.

ಅವರು ಅಂಬ್ಲಿಕಲ್ ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಶೂನ್ಯ ಮತ್ತು ಭ್ರಷ್ಟಾಚಾರ ವಿರೋಧಿಸಿ ನಡೆದ ಪ್ರತಿಭಟನಾ ಸಭೆಯನ್ನು ಉದ್ಧೇಶಿಸಿ ಮಾತನಾಡಿದರು.

ಅಂಬ್ಲಿಕಲ್ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ನಿಯೋಜನೆ ಮಾಡಿರುವ ಕಾಯಕ ಮಿತ್ರ ಹುದ್ದೆಯ ಆಯ್ಕೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸರ್ವೇಶ್ ಲಂಚ ಪಡೆದು ಅಧಿಕಾರ ದುರುಪಯೋಗ ಪಡಿಸಿ ಕೊಂಡಿದ್ದಾರೆ ಎಂದು ದೂರಿದರು. ಕಾಯಕ ಮಿತ್ರ ಹುದ್ದೆಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಲಿಸ್ಟ್ ತಯಾರಿಸುವ ತಾಲೂಕು ಮಟ್ಟದ ಸಮಿತಿಯ ಅಧ್ಯಕ್ಷರಾಗಿರುವ ತಾಲೂಕು ಪಂಚಾಯತ್ ಇಓ ಸರ್ವೇಶ್ ರವರು ಅಧಿಕಾರ ದುರುಪಯೋಗ ಮಾಡಿರುವುದು ದಾಖಲೆಗಳ ಸಮೇತ ರುಜುವಾತು ಆಗಿದೆ. ಈ ಕಾಯಕ ಮಿತ್ರ ಹುದ್ದೆಗೆ ಅದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಆಗಿರಬೇಕು ಎಂಬುದನ್ನು ಉಲ್ಲಂಘಿಸಿ ಅಂಬ್ಲಿಕಲ್ ಗ್ರಾಮ ಪಂಚಾಯಿತಿ ಕಾಯಕ ಮಿತ್ರ ಹುದ್ದೆಗೆ ಗುಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೈನಪಲ್ಲಿ ಗ್ರಾಮದ ನಿವಾಸಿ ಕೆ. ಅನಿತಾ ರವರ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಉದ್ಯೋಗ ಚೀಟಿ ಮುಂತಾದವುಗಳ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ನೇಮಕಾತಿ ಮಾಡಲಾಗಿದೆ. ಇದರಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ಕರ್ಮಕಾಂಡ ನಡೆದಿದೆ ಎಂದು ಆಪಾದಿಸಿದರು.
ಕೂಡಲೇ ತಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಮತ್ತು ಬೋಗಸ್ ದಾಖಲೆಗಳು ಸೃಷ್ಟಿಸಿ ಹುದ್ದೆ ಪಡೆದಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.

ಅಂಬ್ಲಿಕಲ್ ಗ್ರಾಮ ಪಂಚಾಯಿತಿಯಲ್ಲಿ ಕಳೆದ ಎರಡು ವರ್ಷಗಳಿಂದ ಗ್ರಾಮ/ವಾರ್ಡ್ ಸಭೆ ನಡೆಸಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಕೆಲ ಸದಸ್ಯರು ನಾವು ಹೇಳುವವರೆಗೂ ಗ್ರಾಮ/ವಾರ್ಡ್ ಸಭೆ ಮಾಡಬಾರದೆಂದು ಪತ್ರ ನೀಡಿದ್ದಾರೆ ಇದರ ಪರಿಣಾಮ ಪಂಚಾಯಿತಿಯಲ್ಲಿ ಚರಂಡಿ , ಸ್ವಚ್ಚತೆ, ಬೀದಿ ದೀಪ, ಮುಂತಾದ ಮೂಲಸೌಕರ್ಯಗಳ ಇಲ್ಲದೆ ಜನ ತೊಂದರೆ ಎದುರಿಸುತ್ತಿದ್ದಾರೆ. ಇ-ಸ್ವತ್ತು ಮಾಡಿಕೊಡಲು ಜನರಿಂದ ಹಣ ಲಂಚ ವಸೂಲಿ ಮಾಡುತ್ತಿದ್ದಾರೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಅರ್ಜಿ ಆಹ್ವಾನ ಆಗಿಲ್ಲ, ಪೂಜಾರಹಳ್ಳಿ ಗ್ರಾಮಠಾಣಕ್ಕೆ ಮೀಸಲಿಟ್ಟಿರುವ ಸರ್ವೇ ನಂಬರ್ -56 ರಲ್ಲಿ 9 ಎಕರೆ 03 ಗುಂಟೆ ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಅಂಬ್ಲಿಕಲ್ ವಿಜಯ್ ಗೌಡ, ತಾತಿಘಟ್ಪ ಚೆಲುವ ರಾಜ್, ಶಿವಕುಮಾರ್ ,ಕುನಿಬಂಡೆ ಮುನಿರಾಜು, ಪೂಜಾರಹಳ್ಳಿ ಗಂಗಧಾರ್,ಮಾರಂಡಹಳ್ಳಿ ಕೃಷ್ಣಮೂರ್ತಿ, ಬಾಳಸಂದ್ರ ಗುರುರಾಜ್, ವೆಂಕಟರಾಮಪ್ಪ, ನಾಗೇಶ್, ಅಶೋಕ್, ವೆಂಕಟೇಶ್ ಹಾಗೂ ಇತರರು ಹಾಜರಿದ್ದರು.

More articles

Latest article