ತಿರುಪತಿಯ ಹೋಟೆಲ್‌ಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್

ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಲೀಲಾಮಹಲ್‌ ಬಳಿಯ ರಾಜ್‌ಪಾರ್ಕ್‌ ಹೋಟೆಲ್‌ ಸೇರಿದಂತೆ ಮೂರು ಹೋಟೆಲ್‌ಗಳಿಗೆ ಶನಿವಾರ ಸರಣಿ ಬಾಂಬ್ ಸ್ಪೋಟ ಮಾಡುವುದಾಗಿ ಬೆದರಿಕೆಯ ಇಮೇಲ್‌ಗಳು ಬಂದಿದೆ.

ಈ ವಿಷಯ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ವ್ಯಾಪಕ ಹುಡುಕಾಟದ ನಂತರ ಈ ಬೆದರಿಕೆಗಳು ಸುಳ್ಳು ಎಂದು ದೃಢಪಡಿಸಿದ್ದಾರೆ.

ಬಾಂಬ್‌ ಬೆದರಿಕೆಯ ಇಮೇಲ್‌ಗಳು ಇತ್ತೀಚೆಗೆ ಬಂಧಿತರಾದ ಮಾದಕವಸ್ತು ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಆಗಿದ್ದ ಜಾಫರ್ ಸಾದಿಕ್ ಸಂಬಂಧಿಸಿದ್ದು ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.

ತಮಿಳು ಚಲನಚಿತ್ರ ನಿರ್ಮಾಪಕ ಮತ್ತು ಮಾಜಿ ಡಿಎಂಕೆ ಕಾರ್ಯಕರ್ತ ಜಾಫರ್ ಸಾದಿಕ್‌ನನ್ನು ಜುಲೈನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಲಾಗಿತ್ತು.

More articles

Latest article

Most read