ಕೋಲಾರ : ಬೊಲೆರೋ ವಾಹನ ಪಲ್ಟಿ ಆಗಿ ಅದರಲ್ಲಿದ್ದ ಮೂವರು ಸ್ಥಳದಲ್ಲಿ ಸಾವನ್ನಪ್ಪಿದ್ದು ಹತ್ತಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿರುವ ಘಟನೆ ಕೋಲಾರದ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೋನಿ ಗೇಟ್ ಬಳಿ ನೆನ್ನೆ ರಾತ್ರಿ ನಡೆದಿದೆ. ಮೃತರನ್ನು ನೆರೆಯ ಆಂಧ್ರಪ್ರದೇಶದ ಮುನಿಯಮ್ಮ, ವೆಂಕಟಪ್ಪ ಹಾಗೂ ಶ್ರೀನಿವಾಸಲು ಎಂದು ಗುರುತಿಸಲಾಗಿದ್ದು ಇವರೊಂದಿಗಿದ್ದ ಸುಮಾರು 10 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಹಾಗೂ ಆಂಧ್ರಪ್ರದೇಶದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಸದರಿ ಕಾರ್ಮಿಕರು ನಿನ್ನೆಯ ದಿನ ಶ್ರೀನಿವಾಸಪುರಕ್ಕೆ ಹುಣಿಸೆಹಣ್ಣು ಬಿಡಿಸುವ ಸಲುವಾಗಿ ಬಂದಿದ್ದರೆನ್ನಲಾಗಿದ್ದು ನಿನ್ನೆ ವಾಪಸ್ ಹೋಗುತ್ತಿದ್ದಾಗ ರೈಲ್ವೆ ಬ್ರಿಡ್ಜ್ ನ ತಿರುವಿನಲ್ಲಿ ರೋಡ್ ಹಂಪ್ ಜಂಪ್ ಮಾಡಿದಾಗ ಆಯ ತಪ್ಪಿ ಸಮೀಪದ ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ಮೂರು ಮಂದಿ ಸಾವನ್ನಪ್ಪಿದ್ದಾರೆ. ಘಟನಾಸ್ಥಳಕ್ಕೆ ಶ್ರೀನಿವಾಸಪುರ ಠಾಣಾ ಇನ್ಸ್ಪೆಕ್ಟರ್ ಶಂಕರಾಚಾರಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.


