ಬಿಹಾರದಲ್ಲಿ ಮತಗಳನ್ನು ಕಳವು ಮಾಡಿ ಬಿಜೆಪಿ ಚುನಾವನೆ ಗೆದ್ದಿದೆ: ಸಚಿವ ಸಂತೋಷ್‌ ಲಾಡ್‌ ಆರೋಪ

Most read

ಬೀದರ್‌: ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಮತದಾರರ ಪಟ್ಟಿಯಿಂದ 65 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಿ ಹೊಸದಾಗಿ 25 ಲಕ್ಷ ಮತದಾರರ ಹೆಸರು ಸೇರಿಸಲಾಗಿದೆ. ಈ ಮೂಲಕ ಸುಮಾರು 84 ಲಕ್ಷ ಮತಗಳನ್ನು ಕಳವು ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಆರೋಪಿಸಿದ್ದಾರೆ.

ಬಿಹಾರ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ಪರ್ಧಿಸಿದ್ದೇ 100 ಸ್ಥಾನಗಳಿಗೆ. ಅದರಲ್ಲಿ 90 ಸೀಟುಗಳನ್ನು ಗೆದ್ದುಕೊಂಡಿದೆ. 90 ಸೀಟ್‌ ಅಷ್ಟು ಸೀಟುಗಳನ್ನು ಗೆಲ್ಲಲು ಅವರು ಮಾಡಿರುವ ಸಾಧನೆಗಳಾದರೂ ಏನು ಎಂದು ಪ್ರಶ್ನಿಸಿದರು.

ಮತದಾನಕ್ಕೆ ಕೇವಲ ಒಂದು ತಿಂಗಳು ಇರುವಾಗ ಮಹಿಳೆಯರ ಖಾತೆಗೆ ರೂ.10 ಸಾವಿರ ಜಮೆ ಮಾಡಲಾಗಿದೆ. ಕೇಂದ್ರದಲ್ಲಿ 11 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ ಹೀಗೆ ಸರ್ಕಾರದ ಹಣವನ್ನು ಕೊಡುವ ಉದ್ದೇಶವಾದರೂ ಏನಿತ್ತು? ಎಂದೂ ಪ್ರಶ್ನಿಸಿದರು. ಚುನಾವಣಾ ಆಯೋಗವು ವಿಶೇಷ ಪರಿಷಕ್ರಣೆ ಹೆಸರಿನಲ್ಲಿ 65 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದೆ. ಸುಪ್ರೀಂಕೋರ್ಟ್‌ ಹೇಳಿದರೂ ಪುನಃ ಸೇರಿಸಲಿಲ್ಲ. ಈ ಬೆಳವಣಿಗೆಗಳೆಲ್ಲಾ ಮತಗಳನ್ನು ಕದ್ದಿರುವುದನ್ನು ತೋರಿಸುತ್ತವೆ ಎಂದು ವಾಗ್ದಾಳಿ ನಡೆಸಿದರು.

More articles

Latest article