Saturday, September 14, 2024

ಬಿಜೆಪಿ ಅಂದರೆ ಸುಳ್ಳಿನ ಪಕ್ಷ : ಸಿದ್ದರಾಮಯ್ಯ

Most read

ರಾಜ್ಯಪಾಲರ ಬಾಯಿಯಲ್ಲಿ ಸುಳ್ಳು ಹೇಳಿಸಿದ್ದಾರೆ. ಇದು ಬಹಳ ನಿರಾಷದಾಯಕ ಭಾಷಣ ಎಂದು ಆರೋಪ ಮಾಡುತ್ತಿದ್ದ ವಿರೋಧ ಪಕ್ಷದವರಿಗೆ ʼರಾಜ್ಯಪಾಲರು ಸತ್ಯವನ್ನೇ ಹೇಳಿದ್ದಾರೆ. ನಮ್ಮ ಗ್ಯಾರಂಟಿಗಳ ಬಗ್ಗೆ ರಾಜ್ಯಪಾಲರು ಮಾತನಾಡಿದ್ದೆ ವಿಪಕ್ಷದವರಿಗೆ ಸುಳ್ಳು ಎನಿಸಿದೆ. ನಮ್ಮ ಗ್ಯಾರಂಟಿಗಳು ಜನರನ್ನು ತಲುಪಿವೆʼ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.

ವಿಧಾನ ಸಭೆಯಲ್ಲಿ ರಾಜ್ಯಪಾಲರ ಭಾಷಣದ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ʼಸರ್ಕಾರದ ನೀತಿಯನ್ನು, ನಿಲುವನ್ನು, ಮುನ್ನೋಟವನ್ನು, ಕಾರ್ಯಕ್ರಮಗಳನ್ನು ಬಹಳ ಸ್ಪಷ್ಟವಾಗಿ ಸದನದ ಮುಂದೆ ಹಾಗು ರಾಜ್ಯದ ಜನತೆಯ ಮುಂದೆ ರಾಜ್ಯಪಾಲರು ಹೇಳಿದ್ದಾರೆ. ಸಂವಿಧಾನ ಘನತೆಯನ್ನು ಎತ್ತಿಹಿಡಿದ್ದಾರೆ ಎಂದು ಹೇಳಿದರು.

ʼಬಿಜೆಪಿ ಅಂದರೆ ಸುಳ್ಳಿನ ಪಕ್ಷ. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸಿಮರು. 2018ರಲ್ಲಿ ಜನರು ನಮಗೆ ಕೊಟ್ಟ ತೀರ್ಪನ್ನು ತಲೆಬಾಗಿ ಒಪ್ಪಿಕೊಂಡಿದ್ದೇವೆ. 2023 ರಲ್ಲಿ ಜನರು ನಿಮ್ಮನ್ನು ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ ಇದನ್ನು ಒಪ್ಪಿಕೊಳ್ಳಿ ಎಂದು ಟೀಕಿಸಿದರು.

More articles

Latest article