ಮರಕ್ಕೆ ಬೈಕ್ ಡಿಕ್ಕಿ; ಪೋಷಕರನ್ನು ನೋಡಲು ಹಾಂಕಾಂಗ್ ನಿಂದ ಆಗಮಿಸಿದ್ದ ಯುವಕ ಸಾವು

ಬೆಂಗಳೂರು: ನಿಯಂತ್ರಣ ಕಳೆದುಕೊಂಡು ಬೈಕ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಅಸುನೀಗಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಜರಾಜೇಶ್ವರಿ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿದೇಶದಿಂದ ಪೋಷಕರನ್ನು ನೋಡಲು ನಗರಕ್ಕೆ ಬಂದಿದ್ದ ಆರ್.ಆರ್.ನಗರ ನಿವಾಸಿ 26 ವರ್ಷದ ಪ್ರಖ್ಯಾತ್ ಮೃತ ದುರ್ದೈವಿ. ಬುಧವಾರ ತಡರಾತ್ರಿ 1 ಗಂಟೆ ವೇಳೆಗೆ ಆರ್.ಆರ್.ನಗರ ಮುಖ್ಯರಸ್ತೆಯಿಂದ ಜಯಣ್ಣ ಸರ್ಕಲ್ ಕಡೆ ಹೋಗುತ್ತಿರುವಾಗ ಈ ಅಪಘಾತ ನಡೆದಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.

ಪ್ರಖ್ಯಾತ್ ನಾಲ್ಕು ತಿಂಗಳಿಂದ ಹಾಂಕಾಂಗ್‌ನ ವಿಮಾನಯಾನ ಸಂಸ್ಥೆಯ ಉದ್ಯೋಗಿ. ಕೆಲವು ದಿನಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದರು. ಅಪಘಾತ ನಡೆದ ದಿನ ಶಾಪಿಂಗ್ ಮಾಡಿ ಬಟ್ಟೆಗಳನ್ನು ಖರೀದಿಸಿದ್ದರು. ಆರ್.ಆರ್.ನಗರ ಆರ್ಚ್ ಬಳಿ ಸ್ನೇಹಿತರನ್ನು ಭೇಟಿ ಮಾಡಿ ಬೈಕ್ನಲ್ಲಿ ಮನೆಗೆ ಹಿಂತಿರುಗುವಾಗ ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ. ಪ್ರಖ್ಯಾತ್ ತಲೆ, ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರು.

More articles

Latest article

Most read