Saturday, December 7, 2024

ಡ್ರೋನ್ ಪ್ರತಾಪ್ ಅನಾರೋಗ್ಯಕ್ಕೆ ಗುರುಜೀಯ ಆ ಮಾತೇ ಕಾರಣವಾಯ್ತ?

Most read

ಬಿಗ್​ಬಾಸ್​ ಮನೆಯಲ್ಲಿ ತಮ್ಮನ್ನು ಕಡೆಗೆಣಿಸಿದ್ದಕ್ಕೆ ಪ್ರತಾಪ್​ ಅಸಾಮಾಧಾನಗೊಂಡಿದ್ದಾರೆ. ಟಾಸ್ಕ್ ವಿಚಾರದಲ್ಲಿ ಕಡೆಗಣಿಸಿದ್ದಕ್ಕೆ ಪ್ರತಾಪ್​ ಬೇಸರಗೊಂಡಿದ್ದರು. ಈ ವಿಚಾರವಾಗಿ ಬಿಗ್​ಬಾಸ್​​ ಮನೆಯಲ್ಲಿ ಡ್ರೋಣ್ ಪ್ರತಾಪ್​ ಕಣ್ಣೀರಿಟ್ಟಿದ್ದರು. ಇದರ ಬೆನ್ನಲ್ಲೇ, ಬಿಗ್ ಬಾಸ್ ಮನೆಗೆ ಭೇಟಿ ನೀಡಿದ್ದ ವಿದ್ಯಾಶಂಕರಾನಂದ ಗುರೂಜಿ, ಅಪ್ಪ- ಅಮ್ಮನನ್ನು ಬಿಟ್ಟರೆ ಚೆನ್ನಾಗಿರ್ತೀಯಾ ಎಂದಿದ್ದ ಗುರೂಜಿ. ಇಲ್ಲದೇ ಹೋದ್ರೆ ಜೀವನ ಅಸಹ್ಯವಾಗುತ್ತೆ ಎಂದು ಹೇಳಿದ್ದರು.

ಈ ಮೊದಲೇ ಮನನೊಂದಿದ್ದ ಪ್ರತಾಪ್ಗೆ ಗುರೂಜಿಯ ಈ ಹೇಳಿಕೆಯಿಂದ ಇನ್ನಷ್ಟು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಇದೇ ಕಾರಣದಿಂದಾಗಿ ಅವರು ಊಟ ತಿಂಡಿ ಬಿಟ್ಟು ಒಬ್ಬೊಂಟಿಯಾಗಿ ಕುಳಿತುಕೊಳ್ಳುತ್ತಿದ್ದರು ಎಂದು ಸಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ನೊಂದ ಪ್ರತಾಪ್ ವಿಟಮಿನ್ ಮಾತ್ರೆ ತೆಗೆದುಕೊಂಡಿದ್ದರಿ ನಂತರ ಅಶ್ವಸ್ಥರಾಗಿದ್ದ ಕಾರಣ ಪ್ರತಾಪ್‌ ಅವರನ್ನು ತಕ್ಷಣವೇ ಎಸ್ಎಸ್‌ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದ್ದು ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಇನ್ನು ಬಿಗ್‌ ಬಾಸ್‌ ಮೂಲ ಹೇಳುವ ಪ್ರಕಾರ ಪ್ರತಾಪ್‌ ಅವರಿಗೆ ಫುಡ್‌ ಪಾಯ್ಸನ್‌ ಆಗಿದೆ ಎಂದಿದ್ದಾರೆ.ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಸಮಾಜಿಕ ಜಾಲತಾಣದಲ್ಲಿ ಪ್ರತಾಪ್ ಅನಾರೋಗ್ಯಕ್ಕೆ ಇತರ ಸ್ಪರ್ಧಿಗಳು ಪ್ರತಾಪ್‌ ಅವರನ್ನು ಹೀಯಾಳಿಸಿದ್ದು ಕೂಡ ಇದಕ್ಕೆ ಕಾರಣ ಹಾಗೂ ಗುರುಜೀ ಪ್ರತಾಪ್ ಕುಗ್ಗುವಂತಹ ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

 ಗುರೂಜಿ ಮಾತಿನಿಂದ ಡ್ರೋನ್ ಪ್ರತಾಪ್ ಊಟ ಬಿಟ್ಟಿದ್ದ. ವಿಟಮಿನ್ ಟ್ಯಾಬ್ಲೆಟ್ ಸೇವನೆ ಮಾಡುತ್ತಿದ್ದ ಡ್ರೋನ್ ಪ್ರತಾಪ್. ಖಾಲಿ ಹೊಟ್ಟೆಯಲ್ಲಿ ಅತಿಯಾಗಿ ವಿಟಮಿನ್ ಟ್ಯಾಬ್ಲೆಟ್ ಸೇವಿಸಿದ್ದ ಪ್ರತಾಪ್. ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಅತಿಯಾದ ಮಾತ್ರೆ ಸೇವಿಸಿದ್ರಾ ಎಂಬ ಚರ್ಚೆಗಳಿಗೆ ಈಗ ಬಿಗ್ ಬಾಸ್ ಹಾಗೂ ಡ್ರೋನ್ ಪ್ರತಾಪ್ ತಂದೆ ತೆಗೆ ಎಳೆದಿದ್ದಾರೆ.

More articles

Latest article