ಸಿದ್ಧರಾಮಯ್ಯ ಸರ್ಕಾರಕ್ಕೆ ದೊಡ್ಡ ಜಯ: ಸುಪ್ರೀಂಕೋರ್ಟ್ ಗೆ ಬೆದರಿದ ಕೇಂದ್ರದಿಂದ ಬರಪರಿಹಾರ ಘೋಷಣೆ

Most read

ಬೆಂಗಳೂರು: ಕರ್ನಾಟಕ ಸರ್ಕಾರದ ಹೋರಾಟ, ಕನ್ನಡಿಗರ ಪ್ರತಿಭಟನೆ ಕೊನೆಗೂ ಕೈಗೂಡಿದೆ. ಕರ್ನಾಟಕಕ್ಕೆ ಬರ ಪರಿಹಾರ ನೀಡದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರ ಈಗ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಪರಿಹಾರ ಘೋಷಿಸಿದೆ.

ಕೇಂದ್ರದಿಂದ 3,454 ಕೋಟಿ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಒಂದು ವಾರದ ಗಡುವು ಪಡೆದಿದ್ದ ಕೇಂದ್ರ ಸರ್ಕಾರ ಕೊನೆಗೂ ಪರಿಹಾರ ನೀಡುತ್ತಿದೆ. ರಾಜ್ಯ ಸರ್ಕಾರಗಳು ಇಂಥ ವಿಷಯಗಳಿಗೂ ಸುಪ್ರೀಂ ಕೋರ್ಟಿಗೆ ಬರಬೇಕಾ? ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಂಬಂಧ ಮಧುರವಾಗಿರಬೇಕು ಎಂದು ಸುಪ್ರೀಂಕೋರ್ಟ್ ಚಾಟಿ ಬೀಸಿದ ಹಿನ್ನೆಲೆಯಲ್ಲಿ ಕೊನೆಗೂ ಪರಿಹಾರ ಘೋಷಣೆಯಾಗಿದೆ.

ವಾರದೊಳಗೆ ಪರಿಹಾರ ಬಿಡುಗಡೆ ಮಾಡ್ತೀವಿ ಎಂದು ಸುಪ್ರೀಂ ಕೋರ್ಟ್ ಗೆ ವಾಗ್ದಾನ ನೀಡಿದ್ದ ಕೇಂದ್ರ ಸರ್ಕಾರ ವಾರ ಪೂರೈಸಿದ ಹಿನ್ನೆಲೆಯಲ್ಲಿ ಇಂದು ಪರಿಹಾರದ ಘೋಷಣೆ ಮಾಡಿದೆ.

ರಾಜ್ಯಕ್ಕೆ ಬರಪರಿಹಾರ ನೀಡಲಾಗುತ್ತಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ದಾವೆ ಹೂಡಿತ್ತು. ಅದುವರೆಗೆ ಯಾವ ಹಣವನ್ನೂ ಬಾಕಿ ಉಳಿಸಿಕೊಂಡಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ರಾಜ್ಯ ಸರ್ಕಾರ ಬರಪರಿಹಾರದ ಬೇಡಿಕೆಯನ್ನು ತಡವಾಗಿ ಸಲ್ಲಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಕೂಡ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದರು. ಇದೀಗ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯಿಂದಾಗಿ ರಾಜ್ಯ ಸರ್ಕಾರದ ಹೋರಾಟ ಫಲಪ್ರದವಾಗಿದೆ.

More articles

Latest article