‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮ ವಿವಾದದ ಕೇಂದ್ರಬಿಂದುವಾಗಿದೆ. ‘ಬಿಗ್ ಬಾಸ್’ ಶೋ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಯಾದ ಬೆನ್ನಲ್ಲೇ ಪೊಲೀಸರು ಈ ಕುರಿತು ವಿಚಾರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
ನರಕವಾಸಿಗಳಲ್ಲಿರುವ ಹೆಣ್ಮಕ್ಕಳ ಸಾಂವಿಧಾನಿಕ ಹಕ್ಕು ದಮನ ಆಗ್ತಿದೆ. ಅವರ ಖಾಸಗಿತನಕ್ಕೆ ಧಕ್ಕೆ ಆಗುತ್ತಿದೆ ಎಂದು ಸಮಾಜ ಸೇವಕಿ ನಾಗಮಣಿ ಅವರು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮನೆಗೆ ಪೊಲೀಸರ ಸಮೇತ ರಾಜ್ಯ ಮಹಿಳಾ ಆಯೋಗ ಬಿಗ್‌ಬಾಸ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲಿ ಹೆಣ್ಮಕ್ಕಳ ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ಮಾಡಿ ಹೇಳಿಕೆ ಪಡೆದಿದ್ದಾರೆ.
ಈ ಕುರಿತು ನಾಗಮಣಿ ಅವರಿಗೆ ಹಿಂಬರ ಬರೆದಿರುವ ಕುಂಬಳಗೂಡು ಪೊಲೀಸರು, ತಾವು ಬಿಗ್‌ಬಾಸ್-11 ಮನರಂಜನಾ ಕಾರ್ಯಕ್ರಮದ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುತ್ತೆಂದು ಇತ್ಯಾದಿಯಾಗಿ ಮಾನ್ಯ ಕರ್ನಾಟಕ ರಾಜ್ಯ ಮಹಿಳಾ ಆಯೋಗದಲ್ಲಿ ನೀಡಿರುವ ದೂರು ಅರ್ಜಿಗಳ ವಿಚಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಬಿಗ್‌ಬಾಸ್-11 ರ ಕಾರ್ಯಕ್ರಮದಲ್ಲಿ ನರಕವಾಸಿಗಳಾಗಿದ್ದ ಮಹಿಳಾ ಸ್ಪರ್ಧಿಯನ್ನು ಹಾಗೂ ಸಂಬಂಧಪಟ್ಟವರನ್ನು ನಿಯಮಾನುಸಾರ ವಿಚಾರ ಮಾಡಿ ಹೇಳಿಕೆ ಪಡೆದುಕೊಂಡು, ತಾವು ಸಲ್ಲಿಸಿಕೊಂಡಿದ್ದ ಅರ್ಜಿಯನ್ನು ವಿಲೇ ಮಾಡಲಾಗಿದೆ ಎಂದು ಹೇಳಿದೆ.